ಜಿಲ್ಲೆಯ 8 ಶಾಲೆಗಳ ಪ್ರಸ್ತಾವನೆ ತಿರಸ್ಕೃತ
Tumkurnews
ತುಮಕೂರು; ಜಿಲ್ಲೆಯಲ್ಲಿ 2023-24ನೇ ಸಾಲಿಗೆ ಸಂಬಂಧಿಸಿದಂತೆ ಹೊಸದಾಗಿ ಶಾಶ್ವತ ಅನುದಾನ ರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಆನ್‍ಲೈನ್ ಮೂಲಕ ಸಲ್ಲಿಸಿರುವ 8 ಶಾಲೆಗಳ ಪ್ರಸ್ತಾವನೆಗಳನ್ನು ತಿರಸ್ಕತಗೊಳಿಸಲಾಗಿದೆ ಎಂದು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಸಿ.ನಂಜಯ್ಯ ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ನಿಯಮಾನುಸಾರ ಅಗತ್ಯ ಮಾನದಂಡಗಳನ್ನು ಪೂರೈಸಿಲ್ಲದ ಕಾರಣ ಈ ಶಾಲೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ತಿರಸ್ಕೃತ ಅಧಿಕೃತ ಖಾಸಗಿ ಶಾಲೆಗಳ ಪಟ್ಟಿಯನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವ ಪೂರ್ವದಲ್ಲಿ ಇಲಾಖೆಯಿಂದ ನೋಂದಣಿ ಪಡೆದಿರುವ ಹಾಗೂ ಮಾನ್ಯತೆ ಹೊಂದಿರುವ ಬಗ್ಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಮಾಹಿತಿ ಪಡೆಯಬೇಕು. ಇಲಾಖಾ ಅನುಮತಿ ಇಲ್ಲದೆ ಪ್ರಾರಂಭಿಸಿರುವ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿದಲ್ಲಿ ಇಲಾಖೆ ಜವಾಬ್ದಾರಿಯಾಗುವುದಿಲ್ಲ. ತುಮಕೂರು ತಾಲ್ಲೂಕು ಲಿಂಗಾಪುರದ ಆರ್ಕಿಡ್ ಇಂಟರ್ ನ್ಯಾಷನಲ್ ಸ್ಕೂಲ್(1-5ನೇ ತರಗತಿ), ವೀರಸಾಗರ ಅಣ್ಣಯ್ಯಪ್ಪನ ಗಾರ್ಡನ್‍ನಲ್ಲಿರುವ ಷಾಹಿನಾ ವ್ಯಾಲಿ ಸ್ಕೂಲ್(1-5ನೇ ತರಗತಿ), ಗಂಗಸಂದ್ರ ರಸ್ತೆಯಲ್ಲಿರುವ ಶೇಷಾದ್ರಿಪುರಂ ಇಂಗ್ಲೀಷ್ ಸ್ಕೂಲ್(1-5ನೇ ತರಗತಿ), ಶಿರಾಗೇಟ್‍ನಲ್ಲಿರುವ ಅರಿವು ಇಂಟರ್ ನ್ಯಾಷನಲ್ ಸ್ಕೂಲ್(6-8ನೇ ತರಗತಿ), ಚಿಕ್ಕಪೇಟೆಯಲ್ಲಿರುವ ಕಾಳಿಕಾದೇವಿ ವಿದ್ಯಾಮಂದಿರ(6-8ನೇ ತರಗತಿ); ತಿಪಟೂರು ತಾಲ್ಲೂಕು ರಂಗಾಪುರದಲ್ಲಿರುವ ನವ್ಯ ಹಿರಿಯ ಪ್ರಾಥಮಿಕ ಶಾಲೆ(6-8ನೇ ತರಗತಿ ಆಂಗ್ಲ ಮಾಧ್ಯಮ); ಚಿಕ್ಕನಾಯಕನಹಳ್ಳಿ ತಾಲ್ಲೂಕು ತೊರೆಸೂರಗೊಂಡನಹಳ್ಳಿಯ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್(6-8ನೇ ತರಗತಿ); ತುರುವೇಕೆರೆ ತಾಲ್ಲೂಕು ದಬ್ಬೇಘಟ್ಟದಲ್ಲಿರುವ ವಿಶ್ವವಿಜಯ ವಿದ್ಯಾಶಾಲೆ (9 ಮತ್ತು 10ನೇ ತರಗತಿ)ಯ ಪ್ರಸ್ತಾವನೆಯನ್ನು ತಿರಸ್ಕೃತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
+ There are no comments
Add yours