ತುಮಕೂರು ಜಿಲ್ಲೆ; ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಮುನ್ನಡೆ? ಇಲ್ಲಿದೆ ಮಾಹಿತಿ

1 min read

ಎಲ್ಲಿ, ಯಾವ ಪಕ್ಷ ಮುನ್ನಡೆ?
Tumkurnews
ತುಮಕೂರು; ಜಿಲ್ಲೆಯಲ್ಲಿ ಮೇ 10ರಂದು ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದ್ದು, ಒಟ್ಟು 198 ಸುತ್ತಿನಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ
ಜಿಲ್ಲೆಯ ಮಧುಗಿರಿ, ಪಾವಗಡ, ಕೊರಟಗೆರೆ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಮತ ಎಣಿಕಾ ಕಾರ್ಯವು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು; ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ ಕ್ಷೇತ್ರಗಳ ಮತ ಎಣಿಕೆಯು ವಿಶ್ವವಿದ್ಯಾನಿಲಯದ ಕಲಾ ಕಾಲೇಜು ಹಾಗೂ ಕುಣಿಗಲ್, ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಯು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ.
ಎಲ್ಲಿ, ಯಾರು ಮುನ್ನಡೆ?
* ಕೊರಟಗೆರೆ- ಕಾಂಗ್ರೆಸ್ 431 ಮತಗಳಿಂದ ಮುನ್ನಡೆ
* ಮಧುಗಿರಿ- ಕಾಂಗ್ರೆಸ್ 561 ಮತಗಳಿಂದ ಮುನ್ನಡೆ
* ಪಾವಗಡ- ಕಾಂಗ್ರೆಸ್ 251 ಮತಗಳಿಂದ ಮುನ್ನಡೆ
* ಶಿರಾ- ಕಾಂಗ್ರೆಸ್ 331 ಮತಗಳಿಂದ ಮುನ್ನಡೆ
* ಚಿಕ್ಕನಾಯಕನಹಳ್ಳಿ- ಜೆಡಿಎಸ್ 151 ಮತಗಳಿಂದ ಮುನ್ನಡೆ
* ತಿಪಟೂರು- ಕಾಂಗ್ರೆಸ್ 278 ಮತಗಳಿಂದ ಮುನ್ನಡೆ
* ಗುಬ್ಬಿ- ಕಾಂಗ್ರೆಸ್ 81 ಮತಗಳಿಂದ ಮುನ್ನಡೆ
* ತುಮಕೂರು ಗ್ರಾಮಾಂತರ- ಬಿಜೆಪಿ 800 ಮತಗಳಿಂದ ಮುನ್ನಡೆ
* ತುಮಕೂರು- ನಗರ ಜೆಡಿಎಸ್ 451 ಮತಗಳಿಂದ ಮುನ್ನಡೆ ಸಾಧಿಸಿದೆ.

About The Author

You May Also Like

More From Author

+ There are no comments

Add yours