ಮಹಿಳೆ ಕಾಣೆ
Tumkurnews
ತುಮಕೂರು; ಜಯನಗರ ಪೊಲೀಸ್ ಠಾಣೆ ವ್ಯಾಪ್ತಿ ನಗರದ ಉಪ್ಪಾರಹಳ್ಳಿಯಲ್ಲಿರುವ ಸ್ವಾಧಾರ ಕೇಂದ್ರದಲ್ಲಿದ್ದ 24 ವರ್ಷದ ಎನ್.ಎಂ ಮವೇದ ಎಂಬ ಮಹಿಳೆಯು 2022ರ ಡಿಸೆಂಬರ್ 19ರಂದು ಬೆಳಿಗ್ಗೆ 7.30 ಗಂಟೆ ಸಮಯದಲ್ಲಿ ಮೆಡಿಕಲ್ ಸ್ಟೋರ್’ಗೆಂದು ಹೋದವಳು ಮರಳಿ ಬಾರದೆ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಾಗಿದೆ.
ಕಾಣೆಯಾದ ಮಹಿಳೆಯು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲುಮುಖ, ಗೋಧಿ ಮೈಬಣ್ಣ, ಹುಟ್ಟು ಕಿವುಡು ಮತ್ತು ತೊದಲು ಹೊಂದಿದ್ದು, ಓದಲು ಬರೆಯಲು ಬರುತ್ತದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ನಗರಂಗೆರೆ ಗ್ರಾಮದ ಮೂಲದವಳಾದ ಈಕೆಯ ಸುಳಿವು ಸಿಕ್ಕಿದವರು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಸಬ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.
ತುಮಕೂರು ನಗರ; ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ
+ There are no comments
Add yours