Tumkurnews
ತುಮಕೂರು; ಕುಣಿಗಲ್ ತಾಲೂಕು ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ವೆಂಕಟೇಗೌಡನಪಾಳ್ಯದ ಬಸವರಾಜು ಎಂಬ 35 ವರ್ಷದ ವ್ಯಕ್ತಿಯು 2022ರ ಡಿಸೆಂಬರ್ 21ರಂದು ತನ್ನ ಮನೆಯಿಂದ ಕಾಣೆಯಾಗಿರುವ ಬಗ್ಗೆ ಪತ್ನಿ ಅನುರಾಧ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ವ್ಯಕ್ತಿಯು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖವನ್ನು ಹೊಂದಿದ್ದು, ಎಡಗೈನಲ್ಲಿ ಬಿ ಎಂಬ ಇಂಗ್ಲೀಷ್ ಅಕ್ಷರದ ಅಚ್ಚೆ ಗುರುತು ಇರುತ್ತದೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದನು.
ಈತನ ಬಗ್ಗೆ ಸುಳಿವು ಸಿಕ್ಕವರು ಕೂಡಲೇ ಅಮೃತೂರು ಪೊಲೀಸ್ ಠಾಣೆ ದುರವಾಣಿ ಸಂಖ್ಯೆ 08132-225229/220294, 0816-2278000, ಮೊ.ಸಂ. 9480802963-36-00ಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಮನವಿ ಮಾಡಿದ್ದಾರೆ.
+ There are no comments
Add yours