ದೇವರಾಯನದುರ್ಗ; ಬ್ರಹ್ಮರಥೋತ್ಸವಕ್ಕೆ ದಿನ ನಿಗದಿ; ಇಲ್ಲಿದೆ ಜಾತ್ರೆ ವಿವರ

1 min read

 

ದೇವರಾಯನದುರ್ಗ: ಮಾ.7ರಂದು ಬ್ರಹ್ಮರಥೋತ್ಸವ

Tumkurnews
ತುಮಕೂರು; ಇತಿಹಾಸ ಪ್ರಸಿದ್ದ ದೇವರಾಯನದುರ್ಗ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಮಾರ್ಚ್ 7 ಹುಣ್ಣಿಮೆಯಂದು ಮಧ್ಯಾಹ್ನ 1ಗಂಟೆಗೆ ನಡೆಯಲಿದೆ.
ಕರಿಗಿರಿ ಕ್ಷೇತ್ರವೆಂದೆ ಪ್ರಸಿದ್ದಿ ಪಡೆದಿರುವ ದೇವರಾಯನದುರ್ಗದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಪ್ರಯುಕ್ತ ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಫೆ.28 ರಂದು ಸಂಜೆ 7ಕ್ಕೆ ಅಂಕುರಾರ್ಪಣ, ಮಾರ್ಚ್ 1ರಂದು ಸಂಜೆ 7.30ಕ್ಕೆ ಧ್ವಜಾರೋಹಣ, ಮಾ.2 ರಂದು ರಾತ್ರಿ 8ಕ್ಕೆ ಶೇಷವಾಹನೋತ್ಸವ, ಮಾ.3ರಂದು ರಾತ್ರಿ 8ಕ್ಕೆ ಸಿಂಹಾರೋಹಣ, ಮಾ.4ರಂದು ರಾತ್ರಿ 8ಕ್ಕೆ ಪುಷ್ಪರಥ, ಮಾ.5ರಂದು ರಾತ್ರಿ 8.30ಕ್ಕೆ ಪ್ರಹ್ಲಾದೋತ್ಸವ ನಂತರ ರಾತ್ರಿ 12ಗಂಟೆಗೆ ರಾಮಾನುಜಕೂಟ ಸೇವೆ ಹಾಗೂ 12.30ಕ್ಕೆ ಕಲ್ಯಾಣೋತ್ಸವ ನಡೆಯಲಿದೆ. ಮಾ.6ರಂದು ಮಧ್ಯಾಹ್ನ 12ಕ್ಕೆ ಗರುಡವಾಹನ, ಸಂಜೆ 5ಕ್ಕೆ ಗಜೇಂದ್ರ ಮೋಕ್ಷ, ರಾತ್ರಿ 8.30ಕ್ಕೆ ನವಿಲು ವಾಹನ ಹಾಗೂ ರಾತ್ರಿ 9.30ಕ್ಕೆ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ.
ಮಾ.8ರಂದು ಮಧ್ಯಾಹ್ನ 12.30ಕ್ಕೆ ಸೂರ್ಯಮಂಡಲೋತ್ಸವ, ರಾತ್ರಿ 10ಗಂಟೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವ, ರಾತ್ರಿ 11 ಕ್ಕೆ ಅಶ್ವವಾಹನೋತ್ಸವ ಇರುತ್ತದೆ. ಮಾ.9ರಂದು ಮಧ್ಯಾಹ್ನ 12ಕ್ಕೆ ತೀರ್ಥಸ್ನಾನ, ಮಧ್ಯಾಹ್ನ1.30ಕ್ಕೆ ಉಯ್ಯಾಲೋತ್ಸವ, ರಾತ್ರಿ 8ಕ್ಕೆ ಕುಂಭಿ ದೇವಸ್ಥಾನದಲ್ಲಿ ಧ್ವಜಾರೋಹಣ, ರಾತ್ರಿ 9.30ಕ್ಕೆ ಚಿತ್ರಗೋಪುರೋತ್ಸವ, ರಾತ್ರಿ10ಕ್ಕೆ ಜಲಕ್ರೀಡೆ ಉತ್ಸವ ಜರುಗಲಿದೆ. ಮಾ.10ರಂದು ರಾತ್ರಿ 9ಕ್ಕೆ ದವನೋತ್ಸವ, ಮಾ.11ರಂದು ಬೆಳಿಗ್ಗೆ 9.30ಕ್ಕೆ ಉಯ್ಯಾಲೋತ್ಸವ, 10.30ಕ್ಕೆ ಕುಂಭಿಬೆಟ್ಟದಲ್ಲಿ (ಪ್ರಾಕಾರೋತ್ಸವ) ಮತ್ತು ಪ್ರಸಾದ ವಿನಿಯೋಗ, ರಾತ್ರಿ 9.30ಕ್ಕೆ ಹನುಮಂತೋತ್ಸವ, 10ಕ್ಕೆ ಶಯನೋತ್ಸವ ಹಾಗೂ ಮಾ.12ರಂದು ಬೆಳಿಗ್ಗೆ 9.30ಕ್ಕೆ ಮಹಾಭಿಷೇಕ ಹಾಗೂ ಮಧ್ಯಾಹ್ನ 12.30ಕ್ಕೆ ಗರುಡೋತ್ಸವ ನಡೆಯುತ್ತದೆ.
ಫೆ.28ರಿಂದ ಮಾ.12ರವರೆಗೆ ರಥೋತ್ಸವ ದಿನ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಶ್ರೀ ಸ್ವಾಮಿಗೆ ಅಭಿಷೇಕ ನಡೆಯುತ್ತದೆ. ರಥೋತ್ಸವ ದಿನದಂದು ಮಾತ್ರ ಮುಂಜಾನೆ 4ಗಂಟೆಗೆ ಅಭಿಷೇಕ ಇರುತ್ತದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours