ನಗರದಲ್ಲಿ ಸರಣಿ ಕಳ್ಳತನ
Tumkur news
ತುಮಕೂರು; ನಗರದ ಒಂದೇ ರಸ್ತೆಯ 9ಕ್ಕೂ ಹೆಚ್ಚು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿರುವ ಘಟನೆ ನಡೆದಿದೆ.
ಸೋಮವಾರ ತಡರಾತ್ರಿ ಘಟನೆ ಸಂಭವಿಸಿದ್ದು, ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ನಗರದ ಎಸ್ಐಟಿ ಹಾಗೂ ಎಸ್.ಎಸ್.ಪುರಂ ಮುಖ್ಯ ರಸ್ತೆಯಲ್ಲಿನ ಅಂಗಡಿಗಳ ಬೀಗ ಮುರಿದು ಕಳವು ನಡೆಸಿದ್ದಾರೆ.
ಎಸ್ಐಟಿ ಮುಖ್ಯ ರಸ್ತೆಯ ಶ್ರೀರಂಗ ಮೆಡಿಕಲ್ಸ್ , ಹೊನ್ನಾದೇವಿ ಡಯಾಗ್ನೋಸ್ಟಿಕ್, ಎನ್.ಎಸ್ ಮೆಡಿಕಲ್ಸ್ , ಆನಂದ್ ಅಂಡ್ ಸನ್ಸ್ , ಮಂಜು ಮೆಡಿಕಲ್ ಸೇರಿದಂತೆ ಹಲವು ಅಂಗಡಿಗಳ ಬೀಗ ಮುರಿದು ಕಳ್ಳತನ ನಡೆಸಿದ್ದಾರೆ.
ನಗರದಲ್ಲಿ ನಡೆದಿರುವ ಸರಣಿ ಕಳವು ಪ್ರಕರಣಗಳಿಂದ ವರ್ತಕರು, ಸಾರ್ವಜನಿಕರು ಭಯಗೊಂಡಿದ್ದು, ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಗಸ್ತು ವೈಫಲ್ಯದಿಂದ ಕೃತ್ಯ ಸಂಭವಿಸಿದೆ ಎಂದು ವರ್ತಕರು ಕಿಡಿಕಾರಿದ್ದಾರೆ.
ಅಣ್ಣನೊಂದಿಗೆ ಅನೈತಿಕ ಸಂಬಂಧ!; ಸುಂದರಿ ಕೊಟ್ಟಳು ಸುಪಾರಿ
ಸ್ಥಳಕ್ಕೆ ತುಮಕೂರು ಶಾಸಕ ಜಿ.ಬಿ ಜ್ಯೋತಿಗಣೇಶ್ ಭೇಟಿ ನೀಡಿ ಸೂಕ್ತ ತನಿಖೆಗೆ ಸೂಚಿಸಿದ್ದಾರೆ. ಡಿವೈಎಸ್ಪಿ ಶ್ರೀನಿವಾಸ್ ಸೇರಿದಂತೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
+ There are no comments
Add yours