Tumkur news
ತುಮಕೂರು; ಮಾಜಿ ಸಿಎಂ ಸಿದ್ದರಾಮಯ್ಯಗೆ ಕೋಲಾರಗಿಂತ ವರುಣಾನೆ ಸುರಕ್ಷಿತ ಕ್ಷೇತ್ರ ಎಂದು ಮಧುಗಿರಿ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವರಾಣಾದಲ್ಲೇ ಸ್ಪರ್ಧಿಸಿದರೆ ಒಳಿತು, ಅವರ ಪುತ್ರ ಯತೀಂದ್ರಗೆ ಬೇರೆ ಅವಕಾಶ ಕಲ್ಪಿಸಬಹುದು, ಸಿದ್ದರಾಮಯ್ಯ ಅವರಿಗೆ ವರುಣಾನೇ ಸುರಕ್ಷಿತ ಕ್ಷೇತ್ರ ಎನ್ನುವುದು ನನ್ನ ಭಾವನೆ ಎಂದರು.
ಸಿದ್ದರಾಮಯ್ಯ ಅವರಿಗೆ ಸುರಕ್ಷಿತ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವಂತೆ ನಾನು ಮನವಿ ಮಾಡುತ್ತೇನೆ, ವರುಣಾದಲ್ಲಿ ಸ್ಪರ್ಧೆ ಮಾಡಿದರೆ ಅವರಿಗೆ ಸಮಯದ ಉಳಿತಾಯವಾಗುತ್ತದೆ, ಬೇರೆ ಕ್ಷೇತ್ರದಲ್ಲಿ ಓಡಾಡಿ ಕಾಂಗ್ರೆಸ್‌ಗೆ ಹೆಚ್ಚಿನ ಸೀಟು ಗೆಲ್ಲಿಸಲು ಸಮಯ ಸಿಗುತ್ತದೆ. ಕೋಲಾರದಲ್ಲಿ ಸಿದ್ದರಾಮಯ್ಯರ ವಿರುದ್ಧ ಕರಪತ್ರ ಹಂಚುತ್ತಿದ್ದಾರೆ. ಕೊರಟಗೆರೆಯಲ್ಲಿ ಹಿಂದೆ ಡಾ.ಜಿ ಪರಮೇಶ್ವರರನ್ನು ಸಿದ್ದರಾಮಯ್ಯ ಸೋಲಿಸಿದರು ಎಂದು ಕರಪತ್ರ ಹಂಚುತ್ತಿದ್ದಾರೆ.
ಕೆ.ಎನ್. ರಾಜಣ್ಣ ಹೇಳಿಕೆ ವಿರೋಧಿಸಿ ಪ್ರತಿಭಟನೆ
ಆದರೆ ಸಿದ್ದರಾಮಯ್ಯ ಕಾಂಗ್ರೆಸ್ ನ ಯಾವ ಅಭ್ಯರ್ಥಿಗೂ ವಿರೋಧ ಮಾಡಿಲ್ಲ. ಆದರೂ ಕೋಲಾರದಲ್ಲಿ ದಲಿತರು ಈ ರೀತಿ ಕರಪತ್ರಗಳನ್ನು ಹಂಚಿದ್ದಾರೆ. ಕೊರಟಗೆರೆಯಲ್ಲೂ ಸಿದ್ದರಾಮಯ್ಯನವರ ಸಮುದಾಯದವರು ಪರಮೇಶ್ವರ್’ಗೆ ವಿರೋಧ ವ್ಯಕ್ತಮಾಡುವ ಸಂದರ್ಭ ಬರಬಹುದು. ಹಾಗಾಗಿ ಒಬ್ಬರಿಗೊಬ್ಬರು ಈ ರೀತಿ ಮಾಡಬಾರದು ಎಂದರು.
ಸಿದ್ದರಾಮಯ್ಯ ಅವರು ಕೋಲಾರ, ವರುಣಾ ಎರಡನ್ನೂ ಬಿಟ್ಟು ಮಧುಗಿರಿಗೆ ಬರಲಿ, ಮಧುಗಿರಿ ಜನತೆ ಸಿದ್ದರಾಮಯ್ಯರನ್ನು ಗೆಲ್ಲಿಸುತ್ತಾರೆ. ಅವರು ಮಧುಗಿರಿಯಲ್ಲಿ ನಿಂತರೆ ನಮ್ಮ ಹೆಮ್ಮೆ, ಒಬ್ಬ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅದು ನಮಗೆ ಹೆಮ್ಮೆ ಎಂದು ಕೆ.ಎನ್ ರಾಜಣ್ಣ ಹೇಳಿದರು. ಈ ಮೂಲಕ ತಮ್ಮ ಸ್ವಕ್ಷೇತ್ರವನ್ನು ಬಿಟ್ಟು ಕೊಡುವುದಾಗಿ ಅವರು ಹೇಳಿದರು.
(ಚಿತ್ರ; ಸಾಂದರ್ಭಿಕ)
ವ್ಯಕ್ತಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಡಾ. ಜಿ. ಪರಮೇಶ್ವರ್
+ There are no comments
Add yours