ಕುಣಿಗಲ್ ಪೊಲೀಸ್ ಠಾಣೆ: 3 ಅಪರಿಚಿತ ಶವ ಪತ್ತೆ
Tumkurnews
ತುಮಕೂರು: ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ 3 ಅಪರಿಚಿತ ಶವಗಳು ಪತ್ತೆಯಾಗಿದ್ದು, ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪ್ರಕರಣ-1: ಕುಣಿಗಲ್ ದೊಡ್ಡಕೆರೆಯ ಕೋಡಿ ನೀರು ಹರಿಯುವ ಸ್ಥಳದಲ್ಲಿ ಜನವರಿ 4ರಂದು ಬೆಳಿಗ್ಗೆ 11.55ರ ಸಮಯದಲ್ಲಿ ಸುಮಾರು 40 ವರ್ಷದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು, ಮೃತನು 5.6 ಅಡಿ ಎತ್ತರ, ಕಪ್ಪು ಮೈಬಣ್ಣ, ದೃಢಕಾಯ ಶರೀರ ಹೊಂದಿದ್ದು, ಬಲಗೈಯಲ್ಲಿ ವಿನೋದ ಎಂದು ಎಡಗೈನಲ್ಲಿ ನವ್ಯ ಎಂಬ ಹಚ್ಚೆ ಗುರುತಿದ್ದು, ಮೃತನ ಮೈಮೇಲೆ ಪಾಚಿ ಬಣ್ಣದ ತುಂಬು ತೋಳಿನ ಷರ್ಟ್ ಕಪ್ಪು ಪ್ಯಾಂಟ್ ಇರುತ್ತದೆ.
ಪ್ರಕರಣ-2: ಕುಣಿಗಲ್ ಚಿಕ್ಕಕೆರೆಯ ಪಾರ್ಕ್ ಬಳಿಯ ರಸ್ತೆ ಪಕ್ಕದ ಗದ್ದೆಯಲ್ಲಿ ಜನವರಿ 4ರಂದು ಸಂಜೆ 6.20 ಗಂಟೆಗೆ ಸುಮಾರು 40 ವರ್ಷದ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದ್ದು, ಮೃತನು 5.5 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈಯಲ್ಲಿ ನವಿಲು ಗರಿಯಾಕೃತಿಯ ಹಚ್ಚೆ ಹಾಗೂ ಎಡಗೈನಲ್ಲಿ ಒ ಎಂಬ ಹಚ್ಚೆ ಗುರುತಿದ್ದು, ಮೃತನ ಮೈಮೇಲೆ ಸಿಮೆಂಟ್ ಬಣ್ಣದ ಬನಿಯನ್, ನೀಲಿ ಮತ್ತು ಗ್ರೇ ಮಿಶ್ರಿತ ಆಫ್ ಪ್ಯಾಂಟ್ ಇರುತ್ತದೆ.
ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ದೂ.ವಾ.ಸಂ. 08132-220229, 0816-2272451ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಮನವಿ ಮಾಡಿದ್ದಾರೆ.
+ There are no comments
Add yours