ಹೈನುಗಾರಿಕೆ ಘಟಕ ಸ್ಥಾಪನೆ: ರೈತರಿಂದ ಅರ್ಜಿ ಆಹ್ವಾನ
Tumkurnews
ತುಮಕೂರು; ಪಾವಗಡ ತಾಲ್ಲೂಕು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಹೈನುಗಾರಿಕೆ ಘಟಕ ಸ್ಥಾಪನೆಗಾಗಿ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಭರ್ತಿ ಮಾಡಿದ ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಪ್ರತಿ, ಬಿ.ಪಿ.ಎಲ್. ಕಾರ್ಡ್, ಜಾತಿ ಪ್ರಮಾಣ ಪತ್ರ, ಫ್ರೂಟ್ ಐಡಿ ಸಂಖ್ಯೆ, ಪಹಣಿ ಪತ್ರವನ್ನು ದ್ವಿಪ್ರತಿಯಲ್ಲಿ ಲಗತ್ತಿಸಿ 2023ರ ಜನವರಿ 10ರೊಳಗಾಗಿ ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಪಾವಗಡ ಇವರಿಗೆ ಸಲ್ಲಿಸುವಂತೆ ಪಾವಗಡ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಸಿದ್ದಗಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
+ There are no comments
Add yours