AIDSO 69ನೇ ಸಂಸ್ಥಾಪನ ದಿನ
ತುಮಕೂರು; ವಿದ್ಯಾರ್ಥಿ ವೇತನದ ಸಮಸ್ಯೆಯನ್ನು ಬಗೆಹರಿಸಿ, ಹಾಸ್ಟೆಲ್ ಗಳ ಸಂಖ್ಯೆಯನ್ನು ಹೆಚ್ಚಿಸಿ ಹಾಗೂ ಎಲ್ಲಾ ಹಳ್ಳಿಗಳಿಗೆ ಬಸ್ ಸೌಲಭ್ಯವನ್ನ ಕಲ್ಪಿಸುವಂತೆ ಒತ್ತಾಯಿಸಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
69ನೇ ಸಂಸ್ಥಾಪನಾ ದಿನದ ಅಂಗವಾಗಿ ನಗರದ ಖಾಸಗಿ ಬಸ್ ನಿಲ್ದಾಣದ ಎದುರು ನಡೆದ ಪ್ರತಿಭಟನೆಯಲ್ಲಿ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿದರು. ಇಂದು AIDSO ವಿದ್ಯಾರ್ಥಿ ಸಂಘಟನೆಯ ಸಂಸ್ಥಾಪನ ದಿನ, ನಮ್ಮ ದೇಶದ ನವೋದಯ ಚಿಂತಕರಿಂದ ಹಾಗೂ ಭಗತ್ ಸಿಂಗ್, ನೇತಾಜಿ ಹಾಗೂ ಇನ್ನು ಹಲವಾರು ಕ್ರಾಂತಿಕಾರಿಗಳಿಂದ ಸ್ಫೂರ್ತಿಯನ್ನು ಪಡೆದು ಈ ದೇಶದ ವಿದ್ಯಾರ್ಥಿಗಳ ಹಾಗೂ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ಕಟ್ಟುತ್ತಿದೆ. ಜೊತೆಗೆ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ವಿದ್ಯಾರ್ಥಿಗಳ ನಡುವೆ ತೆಗೆದುಕೊಂಡು ಹೋಗಲು ಹಗಲಿರುಳು ಶ್ರಮಿಸುತ್ತಿದೆ ಎಂದರು.
ಹೊರಾಟವನ್ನು ಉದ್ದೇಶಿಸಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಮಾತನಾಡಿ, ನೇತಾಜಿ ಮತ್ತು ಭಗತ್ ಸಿಂಗ್ ಅವರ ರಾಜಿರಹಿತ ಹೋರಾಟದ ಕನಸು ನನಸಾಗಿಸುವ ಮತ್ತು ಅವರು ಶಿಕ್ಷಣ ವೈಜ್ಞಾನಿಕ, ಧರ್ಮನಿರಪೇಕ್ಷ ಪ್ರಜಾಸತಾತ್ಮಕವಾಗಿರಬೇಕು ಮತ್ತು ಈ ದೇಶದ ಪ್ರತಿ ಮಗುವಿಗು ಉಚಿತವಾಗಿ ಶಿಕ್ಷಣ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಮೂಲಸೌಕರ್ಯಗಳು ಉಚಿತವಾಗಿ ಸಿಗಬೇಕು ಎಂಬುದಾಗಿತ್ತು. ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯನ್ನು ಈ ಮಹಾನ್ ಕ್ರಾಂತಿಕಾರಿಗಳ ಕನಸನ್ನು ನನಸು ಮಾಡುವ ಸದುದ್ದೇಶದಿಂದ ಅನುಶೀಲನ ಸಮಿತಿಯ ಸದಸ್ಯ ಶಿವಾದಾಸ್ ಘೋಷ್ ಮತ್ತು ಕೆಲವು ವಿದ್ಯಾರ್ಥಿಗಳು ಸ್ಥಾಪಿಸಿದರು ಇಂದಿಗೆ 69ನೇಯ ಸಂಸ್ಥಾಪನ ದಿನವನ್ನು ಈ ಸಂಕಲ್ಪದೊಂದಿಗೆ ಆಚರಿಸುತ್ತಿದ್ದೇವೆ ಮತ್ತು ನಿರಂತರವಾಗಿ ವಿದ್ಯಾರ್ಥಿ ಸಮಸ್ಯೆಗಳನ್ನು ವಿರೋಧಿಸಿ ಹೋರಾಟಗಳನ್ನು ಬೆಳೆಸುತ್ತಿದೆ ಎಂದು ತಿಳಿಸಿದರು.
ತುಮಕುರು ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಮೂಲಭೂತ ಸಮಸ್ಯೆಗಳಾದ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಬಸ್ ಸಂಖ್ಯೆಯನ್ನು ಹೆಚ್ಚಿಸಬೇಕು, ಎಲ್ಲಾ ಹಳ್ಳಿಗಳಿಗೆ ಬಸ್ ಸೌಲಭ್ಯ ಒದಗಿಸಬೇಕು ಹಾಗೂ ಸಮಯಕ್ಕೆ ಸರಿಯಾಗಿ ಬರುವಂತೆ ಸೂಚನೆ ನೀಡಬೇಕು, ಹಾಗೂ ವಿದ್ಯಾರ್ಥಿ ದಾಖಲಾತಿಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯಗಳ ಕೊರತೆ ನೀಗಿಸುವಂತೆ ಕ್ರಮವಹಿಸಬೇಕು ಮತ್ತು ಇದರ ಜೊತೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಘಟನೆಯ ಕಾರ್ಯಕರ್ತರುಗಳಾದ ನಿತೀನ್, ನಂದೀಶ್.ಎಸ್, ರಶ್ಮಿ, ಸಂಧ್ಯಾ, ನಂದೀಶ್.ಎಂ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
+ There are no comments
Add yours