ರಾಜ್ಯಾದ್ಯಂತ ‘ನಮ್ಮ ಕ್ಲಿನಿಕ್’ಗಳು ಆರಂಭ, ಕಲ್ಪತರು ನಾಡಿಗೆ 10 ಕ್ಲಿನಿಕ್; ಉಪಯೋಗವೇನು ಗೊತ್ತೇ?

1 min read

 

Tumkurnews
ತುಮಕೂರು; ಸಾರ್ವಜನಿಕರಿಗೆ ಸಮಗ್ರ ಪ್ರಾಥಮಿಕ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ “ನಮ್ಮ ಕ್ಲಿನಿಕ್”ಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ವಚ್ರ್ಯುಯಲ್ ಮೋಡ್ ಮೂಲಕ ಉದ್ಘಾಟಿಸಿದರು. ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ಬೈರದೇವರ ಕೊಪ್ಪದಲ್ಲಿ ನಮ್ಮ ಕ್ಲಿನಿಕ್ ಅನ್ನು ಉದ್ಘಾಟಿಸಿದ್ದು, ನಂತರ ವಚ್ರ್ಯುಯಲ್ ಮೋಡ್ ಮೂಲಕ ರಾಜ್ಯದ ಉಳಿದ ಜಿಲ್ಲೆಗಳ ನಮ್ಮ ಕ್ಲಿನಿಕ್‍ಗಳನ್ನು ಅವರು ಉದ್ಘಾಟಿಸಲಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ಬರುವವರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯಲಿ; ಸಚಿವ ಸುಧಾಕರ್
ತುಮಕೂರು ಜಿಲ್ಲೆಯಲ್ಲಿ ಪ್ರತಿ 30,000 ದಿಂದ 60,000 ಜನಸಂಖ್ಯೆಗೆ ಒಂದರಂತೆ 10 ನಮ್ಮ ಕ್ಲಿನಿಕ್‍ಗಳನ್ನು ಸ್ಥಾಪಿಸಲಾಗುತ್ತಿದೆ. ಮರಳೂರು ದಿಣ್ಣೆ, ಮೇಳೆಕೋಟೆ, ಜಯಪುರ ಅಂಗನವಾಡಿ, ದೇವರಾಯ ಪಟ್ಟಣದ ಸಮುದಾಯ ಭವನ, ದಿಬ್ಬೂರು ಅಂಗನವಾಡಿ, ಸತ್ಯಮಂಗಲ ಸಮುದಾಯ ಭವನ, ಕೆ.ಆರ್. ಬಡಾವಣೆ ಸೇರಿದಂತೆ ನಗರ ಪ್ರದೇಶದಲ್ಲಿ 7 ಹಾಗೂ ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ತಲಾ 1 ನಮ್ಮ ಕ್ಲಿನಿಕ್‍ಗಳನ್ನು ತೆರೆಯಲಾಗುತ್ತಿದೆ.
ತುಮಕೂರು ನಗರದ ಮರಳೂರು ದಿಣ್ಣೆ, ಮೆಳೇಕೋಟೆ ಹಾಗೂ ಮಧುಗಿರಿ, ಪಾವಗಡ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸ್ಥಾಪಿಸಿರುವ ನಮ್ಮ ಕ್ಲಿನಿಕ್‍ಗಳನ್ನು ಡಿ.14ರಂದು ಮುಖ್ಯಮಂತ್ರಿಗಳು ವಚ್ರ್ಯುಯಲ್ ಮೋಡ್ ಮೂಲಕ ಉದ್ಘಾಟಿಸಲಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ.
ಆರೋಗ್ಯ ಸೇವೆಗಳು ಅತ್ಯಾವಶ್ಯವಿರುವ ಜನಸಂಖ್ಯೆಯ ಮೌಲ್ಯಮಾಪನ ಮತ್ತು ನಗರ ಪ್ರದೇಶಗಳ ಮ್ಯಾಪಿಂಗ್ ಆಧಾರದ ಮೇಲೆ ಪ್ರಸ್ತುತ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೌಲಭ್ಯಗಳಿಲ್ಲದ ಕೊಳೆಗೇರಿ, ದುರ್ಬಲ ಪ್ರದೇಶಗಳಲ್ಲಿ ನಮ್ಮ ಕ್ಲಿನಿಕ್ ತೆರೆಯಲು ಆದ್ಯತೆ ನೀಡಲಾಗಿದೆ.

ತುಮಕೂರು ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು 76 ಕೋಟಿ ರೂ., ಅನುಮೋದನೆ; ಜಿಲ್ಲಾ ಬಿಜೆಪಿ ಅಭಿನಂದನೆ
ಆರೋಗ್ಯ ಕ್ಷೇತ್ರದ ಬಲವರ್ಧನೆಗಾಗಿ 15ನೇ ಹಣಕಾಸು ಆಯೋಗವು ರಾಜ್ಯದಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಆರೋಗ್ಯ ಕ್ಷೇತ್ರವನ್ನು ತಳಮಟ್ಟದಿಂದ ಬಲಪಡಿಸುವ ಮತ್ತು ಸುಧಾರಣೆ ತರುವ ದೃಷ್ಠಿಯಿಂದ ಈಗಾಗಲೇ ಕಾರ್ಯ ನಿರ್ವನಿರ್ವಹಿಸುತ್ತಿರುವ ನಗರ ಪ್ರಾಥಮಿಕ ಆರೋಗ್ಯ ಕೆಂದ್ರಗಳ ಜೊತೆಯಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ನೀಡಲು ನಮ್ಮ ಕ್ಲಿನಿಕ್‍ಗಳನ್ನು ತೆರೆಯಲಾಗುತ್ತಿದೆ.
ನಮ್ಮ ಕ್ಲಿನಿಕ್ ಯೋಜನೆಯಡಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ವಿಶ್ವದರ್ಜೆಯ ಉಚಿತ ಚಿಕಿತ್ಸೆ, ಕಾಳಜಿಯುತ ಆರೋಗ್ಯ ಸೇವೆ ಹಾಗೂ ನಿರಂತರ ಆರೋಗ್ಯ ಪಾಲನೆಯನ್ನು ಖಾತ್ರಿಪಡಿಸುವ ಮತ್ತು ಕೆಳಹಂತದಿಂದ ಮೇಲಿನ ಹಂತದ ಸೇವೆಗಳನ್ನು ನೀಡುವ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ಹೊಂದಲಾಗಿದೆ.

ತುಮಕೂರು‌ ಜಿಲ್ಲಾಸ್ಪತ್ರೆ ವಿರುದ್ಧ ತನಿಖೆಗೆ ಆದೇಶ
ಆರೋಗ್ಯ ಸೇವೆಗಳಿಗಾಗಿ ಸಾರ್ವಜನಿಕರು ತಮ್ಮ ಸ್ವಂತ ಹಣದ ಖರ್ಚನ್ನು ಕಡಿಮೆ ಮಾಡುವ, ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ಸಂಸ್ಥೆಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡುವ ಉದ್ದೇಶವನ್ನು ನಮ್ಮ ಕ್ಲಿನಿಕ್ ಯೋಜನೆ ಹೊಂದಿದೆಯಲ್ಲದೆ ಯೋಗ ಮತ್ತು ಆರೋಗ್ಯ ಸಂಬಂಧಿತ ಮಾಹಿತಿ ಲಭ್ಯವಿರುತ್ತದೆ.
ನಗರ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ವಿಕೇಂದ್ರೀಕರಿಸುವ ಜೊತೆಗೆ ಸಾಂಕ್ರಾಮಿಕ ರೋಗಗಳ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುತ್ತಾ, ಸಾಂಕ್ರಾಮಿಕ ರೋಗ ಉಲ್ಬಣ ಪರಿಸ್ಥಿತಿಯನ್ನು ತ್ವರಿತಗತಿಯಲ್ಲಿ ದಾಖಲಿಸುವ ವ್ಯವಸ್ಥೆಯನ್ನು ಚಾಲನೆಗೊಳಿಸುವ ಮಹದಾಸೆಯನ್ನು ಕೂಡ ನಮ್ಮ ಕ್ಲಿನಿಕ್ ಹೊಂದಿದೆ. ಇದರಿಂದ ಆರೋಗ್ಯ ಸಂವರ್ಧನೆ ಹಾಗೂ ಕ್ಷೇಮ ಚಟುವಟಿಕೆಗಳ ಮೂಲಕ ಗಂಡಾಂತರಕಾರಿ ಪರಿಸ್ಥಿತಿಗಳನ್ನು ನಿವಾರಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ತಿಳಿಸಿದ್ದಾರೆ.
ವರದಿ- ಆರ್. ರೂಪಕಲಾ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತುಮಕೂರು

ಮೇಲಧಿಕಾರಿಗಳ ಕಿರುಕುಳ; DHO ಕಚೇರಿ ಎದುರು ಸಮುದಾಯ ಆರೋಗ್ಯಾಧಿಕಾರಿಗಳ ಪ್ರತಿಭಟನೆ

About The Author

You May Also Like

More From Author

+ There are no comments

Add yours