ಅದೃಷ್ಟ ದೇವತೆ ಬೆತ್ತಲು ಹೇಳಿಕೆ, ತಿರುಗಿ ಬಿದ್ದ ಅಭಿಮಾನಿಗಳು; D BOSSಗೆ ಬಾಯ್ಕಾಟ್ ಬಿಸಿ!

1 min read

ಡಿ ಬಾಸ್ ದರ್ಶನ್’ಗೆ ಬಾಯ್ಕಾಟ್ ಬಿಸಿ; ಅದೃಷ್ಟ ದೇವತೆಯನ್ನು ಬೆತ್ತಲು..

ಬೆಂಗಳೂರು; ಅದೃಷ್ಟ ದೇವತೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಅಭಿಮಾನಿಗಳು ಮುನಿಸಿಕೊಂಡಿದ್ದು, ದರ್ಶನ್ ಅಭಿನಯದ ಬಹು‌ನಿರಿಕ್ಷಿತ ಕ್ರಾಂತಿ ಚಲನಚಿತ್ರಕ್ಕೆ ಬಾಯ್ಕಾಟ್ ಬಿಸಿ ಮುಟ್ಟಿಸಿದ್ದಾರೆ.
ಕ್ರಾಂತಿ ಚಲನಚಿತ್ರದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ದರ್ಶನ್ ಮಾತಿನ ಭರಾಟೆಯಲ್ಲಿ, “ಅದೃಷ್ಟ ದೇವತೆ ಬಂದಾಗ ಸೀದ ಬೆಡ್ ರೂಂಗೆ ಕರೆದುಕೊಂಡು ಹೋಗಿ ಬಟ್ಟೆ ಬಿಚ್ಚಿ ಕೂರಿಸ್ಕೊಬೇಕು” ಎಂದು ಹೇಳಿದ್ದರು. ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ.
ಹಿಂದೂಗಳು ಅದೃಷ್ಟ ದೇವತೆಯನ್ನು ಅದೃಷ್ಟ ಲಕ್ಷ್ಮಿ ಎಂದು ಆರಾಧಿಸುತ್ತಾರೆ. ನಟ ದರ್ಶನ್ ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಹಿಂದೂಗಳ ಭಾವನೆಗೆ‌ ಧಕ್ಕೆಯಾಗಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದು, ದರ್ಶನ್’ಗೆ ಬುದ್ದಿ‌ ಕಲಿಸಲು ಕ್ರಾಂತಿ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.
ಬೆನ್ನಿಗೆ ನಿಂತ ಅಭಿಮಾನಿಗಳು; ಮತ್ತೊಂದು ಕಡೆ ದರ್ಶನ್ ಅವರ ಕಟ್ಟಾ ಅಭಿಮಾನಿಗಳು ದರ್ಶನ್ ಪರ ನಿಂತಿದ್ದಾರೆ. ಇದೊಂದೇ ಕಾರಣವನ್ನಿಟ್ಟುಕೊಂಡು ಚಿತ್ರ ಬಹಿಷ್ಕಾರ ಸರಿಯಲ್ಲ ಎಂದು‌ ಬಾಯ್ಕಾಟ್’ಗೆ ವಿರೋಧಿಸಿದ್ದಾರೆ. ಒಟ್ಟಿನಲ್ಲಿ ತಮ್ಮ ಒರಟು ಮಾತಿನ ಧಾಟಿಯಿಂದ ಈಗಾಗಲೇ ಮಾಧ್ಯಮಗಳಿಂದ ಅಘೋಷಿತ ಬಹಿಷ್ಕಾರಕ್ಕೆ ಒಳಗಾಗಿರುವ ನಟ ದರ್ಶನ್’ಗೆ ಅದೃಷ್ಟ ದೇವತೆ ಬಗ್ಗೆ ನೀಡಿರುವ ಹೇಳಿಕೆ ಮತ್ತಷ್ಟು ಇಕ್ಕಟ್ಟಿಗೆ ಕಾರಣವಾಗಿದೆ. ಒಟ್ಟಿನಲ್ಲಿ ಚಲನಚಿತ್ರ ಬಹಿಷ್ಕಾರದಂತಹ ಕೃತ್ಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದು ಎಷ್ಟರಮಟ್ಟಿಗೆ ಸರಿ ಎನ್ನುವುದು ಪ್ರಶ್ನೆಯಾಗಿದೆ. ಮುಖ್ಯವಾಗಿ ದರ್ಶನ್’ರಂತಹ ಯಶಸ್ವಿ ನಟ, ಸಾಕಷ್ಟು ಹೊಸಬರಿಗೆ ಪ್ರೋತ್ಸಾಹ ನೀಡುವ ಅಭಿಮಾನಿಗಳ ಪಾಲಿನ ಡಿ ಬಾಸ್ ಇದೆನ್ನೆಲ್ಲ ಮೆಟ್ಟಿ ನಿಲ್ಲುತ್ತಾರೆ ಎನ್ನುವ ವಿಶ್ವಾಸ ಅವರ ಅಭಿಮಾನಿಗಳಲ್ಲಿದೆ.

About The Author

You May Also Like

More From Author

+ There are no comments

Add yours