ಈಜಾಡಲು ತೆರಳಿದ್ದ ಇಬ್ಬರು ಕೆರೆಯಲ್ಲಿ ಮುಳುಗಿ ಸಾವು
Tumkurnews
ತುಮಕೂರು; ಈಜಾಡಲು ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ನಡೆದಿದೆ.
ಇಲ್ಲಿನ ತುಂಬಾಡಿ ಗ್ರಾಮದ ಹೊಸಕೆರೆಯಲ್ಲಿ ಘಟನೆ ಸಂಭವಿಸಿದ್ದು, ತುಮಕೂರು ವಾಸಿಯಾದ ಕೃಷ್ಣಪ್ಪ(45) ಹಾಗೂ ನೀತಿನ್(9)ಮೃತ ದುರ್ದೈವಿಗಳು.
ತುಂಬಾಡಿ ಗ್ರಾಮದ ತನ್ನ ತಂಗಿಯ ಮನೆಗೆ ಬಂದಿದ್ದ ಕೃಷ್ಣಪ್ಪ ಹಾಗೂ ಸ್ನೇಹಿತ ರಾಮಕೃಷ್ಣಯ್ಯ ಎಂಬುವರ ಮಗ ನೀತಿನ್ ವಾಯು ವಿಹಾರಕ್ಕೆ ತೆರಳಿದ್ದರು. ಈ ವೇಳೆ ಈಜಾಡಲು ಇಬ್ಬರು ಕೆರೆಗೆ ಇಳಿದಿದ್ದು, ಆಕಸ್ಮಿಕವಾಗಿ ಮುಳುಗಿದ್ದಾರೆ. ಕೂಡಲೇ ನೀರಿನಲ್ಲಿ ಮುಳುಗುತಿದ್ದವರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
+ There are no comments
Add yours