ಅಮೆಜಾನ್ ಸ್ಕಾಲರ್’ಶಿಪ್; ಪದವಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

1 min read

 

ಪದವಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ

ಪ್ರಸ್ತುತ ಬಿ.ಇ, ಬಿ.ಟೆಕ್ ಕಂಪ್ಯೂಟರ್ ಸೈನ್ಸ್ ಕೋರ್ಸ್, ಐಟಿ ಮತ್ತು ಇತರೆ ಶಾಖೆಗಳಲ್ಲಿ ಮೊದಲ ವರ್ಷದ ಪದವಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಂದ ಸ್ಕಾಲರ್‍ಶಿಪ್‍ಗಾಗಿ ಅಮೆಜಾನ್ ಸಂಸ್ಥೆ ಅರ್ಜಿ ಆಹ್ವಾನಿಸಿದೆ.
ಈ ವಿದ್ಯಾರ್ಥಿ ವೇತನವು ಭಾರತದಲ್ಲಿರುವ ಯುವತಿಯರಿಗೆ ಕಂಪ್ಯೂಟರ್ ವಿಜ್ಞಾನ ಕಲಿಕೆ ಮತ್ತು ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಿದೆ.
ಅರ್ಹತೆ; ಕಂಪ್ಯೂಟರ್ ಸೈನ್ಸ್ ಅಥವಾ ಸಂಬಂಧಿತ ಶಾಖೆಗಳಲ್ಲಿ ಬಿ.ಇ., ಬಿ.ಟೆಕ್ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಈ ವಿದ್ಯಾರ್ಥಿನಿಯರು ಪ್ರಸ್ತುತ ಮೊದಲ ವರ್ಷದ ಪದವಿಗೆ ದಾಖಲಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ.3 ಲಕ್ಷಕ್ಕಿಂತ ಕಡಿಮೆ ಇರಬೇಕು. ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶವನ್ನು ತೆಗೆದುಕೊಳ್ಳಬೇಕು.
ಆರ್ಥಿಕ ನೆರವು; ರೂ. 1,60,000 (ಪದವಿ ಮುಗಿಯುವವರೆ ವರ್ಷಕ್ಕೆ ರೂ. 40,000). ಅಮೇಜಾನ್ ಸ್ಕಾಲರ್‍ಶಿಪ್ ನೊಂದಿಗೆ ಎಂಜಿನಿಯರಿಂಗ್ ಪದವಿ ಪಡೆಯುವವರು ಮುಂದೆ ಕೌಶಲ ಅಭಿವೃದ್ಧಿ, ಉದ್ಯೋಗ ಹುಡುಕುವುದಕ್ಕು ನೆರವು ಪಡೆಯಬಹುದು. ಮಾತ್ರವಲ್ಲ, ಅಮೆಜಾನ್ ಇಂಟರ್ನ್‍ ಷಿಪ್ ಪಡೆಯಲು ಅವಕಾಶವಿರುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನ; 31-12-2022
ಅರ್ಜಿ ಸಲ್ಲಿಸುವ ವಿಧಾನ: ಆನ್‍ಲೈನ್ ನಲ್ಲಿ ಅರ್ಜಿ ಹಾಕಬೇಕು
ಹೆಚ್ಚಿನ ಮಾಹಿತಿಗೆ: www.b4s.in/praja/AFES3 ಸಂಪರ್ಕಿಸಬಹುದು.

About The Author

You May Also Like

More From Author

+ There are no comments

Add yours