ಶಾಸಕ ಡಿ.ಸಿ ಗೌರಿ ಶಂಕರ್, ಅಟ್ಟಿಕಾ ಬಾಬು ಸೇರಿ ಮೂವರ ವಿರುದ್ಧ ಎಫ್.ಐ.ಆರ್
Tumkurnews
ತುಮಕೂರು; ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ನೀಡಿದ ಕೊಲೆಗೆ ಸುಪಾರಿ ಪ್ರಕರಣದಲ್ಲಿ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ ಗೌರಿ ಶಂಕರ್ ಸೇರಿದಂತೆ ಮೂವರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
ಮಾಜಿ ಶಾಸಕ ಬಿ.ಸುರೇಶ್ ಗೌಡ ಅವರು ತಮ್ಮನ್ನು ಕೊಲೆ ಮಾಡಲು ಶಾಸಕ ಡಿ.ಸಿ ಗೌರಿ ಶಂಕರ್ ಅವರ ಆಪ್ತ ಹಿರೇಹಳ್ಳಿ ಮಹೇಶ್, ರೌಡಿ ಶೀಟರ್ ಓರ್ವನಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ನ.23ರಂದು ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕ ಡಿ.ಸಿ ಗೌರಿಶಂಕರ್, ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲಿಕ ಬೊಮ್ಮನಹಳ್ಳಿ ಬಾಬು ಹಾಗೂ ವಕೀಲ ಹಾಗೂ ಜೆಡಿಎಸ್ ಮುಖಂಡ ಹಿರೇಹಳ್ಳಿ ಮಹೇಶ್ ವಿರುದ್ಧ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ.
5 ಕೋಟಿಗೆ ಸುಪಾರಿ; ರಾಜಕೀಯ ದ್ವೇಷದಿಂದ ಶಾಸಕ ಡಿ.ಸಿ ಗೌರಿ ಶಂಕರ್ ಅವರ ಪರಮಾಪ್ತ ಹಿರೇಹಳ್ಳಿ ಮಹೇಶ್ ಅವರು ತನ್ನನ್ನು ಕೊಲ್ಲಲು ಜೈಲಿನಲ್ಲಿರುವ ವ್ಯಕ್ತಿಗೆ ಸುಪಾರಿ ನೀಡಿದ್ದಾರೆ. ತುಮಕೂರಿನ ಮಾಜಿ ಮೇಯರ್ ಕೊಲೆ ಪ್ರಕರಣ ಹಾಗೂ ಬೇರೆ ಬೇರೆ ಅಪರಾಧಿ ಆಗಿ ಜೈಲಿನಲ್ಲಿರುವ ವ್ಯಕ್ತಿಗೆ 5 ಕೋಟಿ ರೂ.ಗಳಿಗೆ ಸುಪಾರಿ ನೀಡಲಾಗಿದೆ. ಈ ಹಣವನ್ನು ಶಾಸಕ ಡಿ.ಸಿ ಗೌರಿಶಂಕರ್ ಹಾಗೂ ಬೊಮ್ಮನಹಳ್ಳಿ ಬಾಬು ನೀಡುತ್ತಾರೆ ಎಂದು ಸುಪಾರಿ ನೀಡಿದಾತನಿಗೆ ತಿಳಿಸಲಾಗಿದೆ ಎಂದು ಸುರೇಶ್ ಗೌಡ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
+ There are no comments
Add yours