ಸುರೇಶ್ ಗೌಡ ವಿರುದ್ಧ FIR
Tumkurnews
ತುಮಕೂರು; ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ ಕೊಲೆಗೆ ಸುಪಾರಿ ಆರೋಪ ಮಾಡಿರುವುದರ ವಿರುದ್ಧ ಹಾಲಿ ಜೆಡಿಎಸ್ ಶಾಸಕ ಡಿ.ಸಿ ಗೌರಿಶಂಕರ್ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಸುರೇಶ್ ಗೌಡ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
ಕೊಲೆಗೆ ಸುಪಾರಿ ಪ್ರಕರಣ; ಶಾಸಕ ಡಿ.ಸಿ ಗೌರಿಶಂಕರ್, ಅಟ್ಟಿಕಾ ಬಾಬು ಸೇರಿ ಮೂವರ ವಿರುದ್ಧ FIR
ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಅರಿಯೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ಶಾಸಕ ಬಿ.ಸುರೇಶ್ ಗೌಡ, ಹಾಲಿ ಶಾಸಕ ಡಿ.ಸಿ ಗೌರಿ ಶಂಕರ್ ನನ್ನ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪ ತೀವ್ರ ಚರ್ಚೆಗೆ ಗ್ರಾಸವಾಗಿತ್ತಲ್ಲದೇ ಸುರೇಶ್ ಗೌಡ ನೀಡಿದ ದೂರು ಆಧರಿಸಿ ಕ್ಯಾತ್ಸಂದ್ರ ಪೊಲೀಸರು ಗೌರಿ ಶಂಕರ್ ಸಹಿತ ಮೂವರ ವಿರುದ್ಧ ಎಫ್.ಐ.ಆರ್ ದಾಖಲಿದ್ದರು. ಇದರ ಬೆನ್ನಲ್ಲೇ ಇದೀಗ ಹಾಲಿ ಶಾಸಕ ಡಿ.ಸಿ ಗೌರಿಶಂಕರ್ ನೀಡಿದ ದೂರು ಆಧರಿಸಿ ಹೆಬ್ಬೂರು ಪೊಲೀಸರು ಸುರೇಶ್ ಗೌಡ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ.
ಡಿ.ಸಿ ಗೌರಿಶಂಕರ್ ನೀಡಿರುವ ದೂರಿನಲ್ಲಿ ಸುರೇಶ್ ಗೌಡ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದು, ಸುರೇಶ್ ಗೌಡರಿಂದ ತಮಗೆ ಜೀವ ಭಯವಿರುವುದಾಗಿ ದೂರಿದ್ದಾರೆ. ಹಾಗೂ ತಮಗೆ ಹಾಗೂ ತಮ್ಮ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.
+ There are no comments
Add yours