ನಿರುದ್ಯೋಗಿ ವಿಕಲಚೇತನರಿಗೆ ಉದ್ಯೋಗ ಆಯ್ಕೆ ಶಿಬಿರ

1 min read

ಉದ್ಯೋಗ ಆಯ್ಕೆ ಶಿಬಿರ

Tumkurnews
ತುಮಕೂರು; ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸೆಬಲಿಟಿ(ಎ.ಪಿ.ಡಿ) ಸಂಸ್ಥೆಯ ವತಿಯಿಂದ ನಿರುದ್ಯೋಗಿ ವಿಕಲಚೇತನರಿಗೆ(ಬುದ್ದಿಮಾಂದ್ಯ ಮತ್ತು ಪೂರ್ಣ ಪ್ರಮಾಣದ ದೃಷ್ಟಿದೋಷವುಳ್ಳವರನ್ನು ಹೊರತುಪಡಿಸಿ) ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ನ.26ರಂದು ಬೆಳಿಗ್ಗೆ 10 ಗಂಟೆಗೆ ಗುಬ್ಬಿ ತಾಲ್ಲೂಕಿನ ತಾಲ್ಲೂಕು ಸಭಾಂಗಣದಲ್ಲಿ ಒಂದು ದಿನದ ತರಬೇತಿ ಮತ್ತು ಉದ್ಯೋಗ ಆಯ್ಕೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಗೆ 18 ರಿಂದ 35 ವರ್ಷ ವಯಸ್ಸಿನ 5ನೇ ತರಗತಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ ದೈಹಿಕ ಮತ್ತು ವಾಕ್ ಮತ್ತು ಶ್ರವಣದೋಷವುಳ್ಳ ವಿಕಲಚೇತನ ಅಭ್ಯರ್ಥಿಗಳು ತಮ್ಮ ಪೂರ್ಣ ಮಾಹಿತಿಯೊಂದಿಗೆ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ತರಬೇತಿ ನಂತರ ಅಭ್ಯರ್ಥಿಗಳಿಗೆ ಉದ್ಯೋಗವನ್ನು ಕಲ್ಪಿಸಿಕೊಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ರಾಮಾಂಜಿನಯ್ಯ(ಎ.ಪಿ.ಡಿ.) ಮೊ.ಸಂ.9901055092, ಶಿವಗಂಗಾ(ಎಂ.ಆರ್.ಡಬ್ಲ್ಯೂ) ಮೊ.ಸಂ.9019802967ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours