ಉದ್ದಿಮೆ ಸ್ಥಾಪನೆಗೆ 20 ಲಕ್ಷ ಸಾಲ, 10 ಲಕ್ಷ ಸಬ್ಸಿಡಿ; ಇಂದೇ ಅರ್ಜಿ ಸಲ್ಲಿಸಿ

1 min read

 

20 lakh loan for business establishment; 10 lakh subsidy!; Apply today

ತ್ಮ ನಿರ್ಭರ ಭಾರತ ಅಭಿಯಾನದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ ಅಂಗವಾಗಿ ಒಂದು ಜಿಲ್ಲೆ ಒಂದು ಉತ್ಪನ್ನದಡಿ ತುಮಕೂರು ಜಿಲ್ಲೆಗೆ ತೆಂಗು ಬೆಳೆಯನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ತೆಂಗು ಬೆಳೆ ಅವಲಂಭಿತ ಆಹಾರ ಕಿರು ಉದ್ದಿಮೆಗಳು, ಮಾರಾಟ ಮತ್ತು ರಫ್ತು ಘಟಕಗಳನ್ನು ಸ್ಥಾಪಿಸುವ ಸಣ್ಣ ಉದ್ದಿಮೆದಾರರಿಗೆ ಸಹಾಯಧನವನ್ನು ನೀಡಲಾಗುತ್ತದೆ. ವೈಯಕ್ತಿಕವಾಗಿ ರೈತರು, ರೈತ ಉತ್ಪಾದಕರ ಸಂಸ್ಥೆಗಳು, ಸ್ವ-ಸಹಾಯ ಗುಂಪುಗಳು, ಉತ್ಪಾದಕರ ಸಹಕಾರ ಸಂಘಗಳು ಈ ಹೊಸ ಯೋಜನೆಯನ್ನು ಪ್ರಾರಂಭಿಸಲು ಮತ್ತು ಉನ್ನತೀಕರಣಕ್ಕೆ ಹಾಗೂ ಇತರೆ ಚಾಲ್ತಿಯಲ್ಲಿರುವ ಮೌಲ್ಯವರ್ಧಿತ ಆಹಾರ ಸಂಸ್ಕರಣೆಯ ಕಿರು ಉದ್ದಿಮೆಗಳು ಸದರಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ.35 ಹಾಗೂ ರಾಜ್ಯ ಸರ್ಕಾರದಿಂದ ಶೇ.15 ಸಹಾಯಧನ (ಒಟ್ಟು ಶೇ.50) ಸೌಲಭ್ಯ ಪಡೆಯಬಹುದಾಗಿದೆ.
ಹಾಲಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗತ ಅಸಂಘಟಿತ ಆಹಾರ ಸಂಸ್ಕರಣಾ ಘಟಕಗಳು ಉನ್ನತೀಕರಣಕ್ಕಾಗಿ ಹಾಗೂ ಹೊಸ ಯೋಜನೆಗಾಗಿ ಗರಿಷ್ಠ ರೂ.10 ಲಕ್ಷಗಳ ಮಿತಿಯ ಅನುದಾನದೊಂದಿಗೆ ಯೋಜನಾ ವೆಚ್ಚದ ಶೇ.50 ರಷ್ಟು ಸಾಲ ಸಂಪರ್ಕಿತ ಅನುದಾನದ ಪ್ರಯೋಜನ ಪಡೆಯಲು ಆನ್‍ಲೈನ್ ಮೂಲಕ ಜಾಲತಾಣ http://pmfme.mofpi.gov.in/mis ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಯೋಜನಾ ವೆಚ್ಚ 20 ಲಕ್ಷ ಮೇಲ್ಪಟ್ಟಲ್ಲಿ ಅರ್ಜಿಯನ್ನು ಜಂಟಿ ನಿರ್ದೇಶಕರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ತುಮಕೂರುರವರಿಗೆ ಸಲ್ಲಿಸುವುದು.
ಸ್ವ ಸಹಾಯ ಸಂಘಗಳು, ರೈತ ಉತ್ಪಾದಕರ ಸಂಸ್ಥೆಗಳು ಹಾಗೂ ಸಹಕಾರ ಸಂಘಗಳು ನಿಗದಿಪಡಿಸಿರುವ ಗರಿಷ್ಠ ಮಿತಿಯೊಳಗೆ ಬಂಡವಾಳ ವೆಚ್ಚಕ್ಕಾಗಿ ಯೋಜನಾ ವೆಚ್ಚದ ಶೇ.50 ರಷ್ಟು ಸಾಲ ಸಂಪರ್ಕಿತ ಅನುದಾನದ ಪ್ರಯೋಜನ ಪಡೆಯಲು ಅರ್ಜಿಗಳನ್ನು ಆಫ್ ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮಾಹಿತಿಗಾಗಿ ಜಾಲತಾಣ http://mofpi.nic/pmfme/mis ದಲ್ಲಿ ವೀಕ್ಷಿಸಬಹುದಾಗಿದೆ.
ಯೋಜನೆಯಡಿ ಫಲಾನುಭವಿ ನೊಂದಣಿಗೆ ಮಾನದಂಡಗಳು;
ತೆಂಗು ಬೆಳೆ ಅವಲಂಬಿತ ಆಹಾರ ಕಿರು ಉದ್ದಿಮೆಗಳ ಹೊಸ ಘಟಕಗಳಿಗೆ ಮತ್ತು ಉನ್ನತೀಕರಣಕ್ಕೆ ಅವಕಾಶ.
ಹಾಲಿ ಚಾಲ್ತಿಯಲ್ಲಿರುವ ಎಲ್ಲಾ ಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣ ಮತ್ತು ವಿಸ್ತರಣೆಗೆ ಅವಕಾಶ.
ಫಲಾನುಭವಿಗಳು ತುಮಕೂರು ಜಿಲ್ಲೆಯ ವ್ಯಾಪ್ತಿಯವರಾಗಿದ್ದು, ಉದ್ಯಮದ ಮಾಲೀಕತ್ವ ಹೊಂದಿರಬೇಕು.
ಅರ್ಜಿದಾರರು 18 ವರ್ಷ ಪೂರೈಸಿರಬೇಕು ಮತ್ತು ಕನಿಷ್ಟ 8ನೇ ತರಗತಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಸ್ವ-ಸಹಾಯ ಗುಂಪುಗಳು ಮತ್ತು ರೈತ ಉತ್ಪಾದಕರ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಕಿರು ಉದ್ದಿಮೆದಾರರು ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರುತ್ತಾ, ಆಹಾರ ಉದ್ದಿಮೆಗಳ ಅರ್ಜಿಗಳನ್ನು ಕೃಷಿ ಇಲಾಖೆಗೆ ಮತ್ತು ಇತರೆ ಉದ್ದಿಮೆಗಳ ಅರ್ಜಿಗಳನ್ನು (ಉದಾ: ತೆಂಗಿನ ನಾರು, ತೆಂಗಿನ ಚಿಪ್ಪು) ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಲು ಕೋರಿದೆ ಹಾಗೂ ಸೂಕ್ತ ವೈಯಕ್ತಿಕ ಫಲಾನುಭವಿಗಳು ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು ಮತ್ತು ಸಹಕಾರಿ ಸಂಸ್ಥೆಗಳು ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶ್ರೀ ಗೌತಮ್ (ಮೊ:8217076131) ಶ್ರೀ ಪ್ರಣೀತ್ ಜಿ.ಎಸ್. (ಮೊ:9902856987) ಲೋಕೇಶ್ (ಮೊ:7204727563) ಅಥವಾ ಸುದರ್ಶನ್ (ಮೊ:9900106843) ಮತ್ತು ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಪ್ರಕಟಣೆ ಕೋರಿದೆ.

About The Author

You May Also Like

More From Author

+ There are no comments

Add yours