ಅವಳಿ ಶಿಶು, ಬಾಣಂತಿ ಸಾವು; ವಾರದ ನಂತರ ಜಿಲ್ಲೆಗೆ ಬಂದ ಉಸ್ತುವಾರಿ ಸಚಿವ, ಹೇಳಿದ್ದೇನು?

1 min read

 

Tumkurnews
ತುಮಕೂರು; ಅವಳಿ ಶಿಶು ಮತ್ತು ಬಾಣಂತಿ ಸಾವು ಪ್ರಕರಣದ ಕುರಿತು ‌ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು‌ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ತುಮಕೂರು ಜಿಲ್ಲಾಸ್ಪತ್ರೆ ನಿರ್ಲಕ್ಷ್ಯ; ತಾಯಿ, ಅವಳಿ ಮಕ್ಕಳು ಸಾವು; DHO ಹೇಳಿದ್ದೇನು? Video
ಆಧಾರ್ ಮತ್ತು ತಾಯಿ ಕಾರ್ಡ್ ಇಲ್ಲದ ಕಾರಣಕ್ಕೆ ಗರ್ಭಿಣಿಯನ್ನು ದಾಖಲಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ ಕಾರಣ ಮನೆಯಲ್ಲೇ ಹೆರಿಗೆ ಆಗಿ ಅವಳಿ ಶಿಶುಗಳು ಮತ್ತು ಬಾಣಂತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದು ಎಂಟು ದಿನಗಳ ಬಳಿಕ ಜಿಲ್ಲಾಸ್ಪತ್ರೆಗೆ ಆಗಮಿಸಿದ ಅವರು ಈ‌ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು.

ಅವಳಿ ಮಕ್ಕಳು, ತಾಯಿ ಸಾವು ಪ್ರಕರಣ; ವೈದೈ, ಮೂವರು ನರ್ಸ್ ಅಮಾನತು
ಬಾಣಂತಿ ಸಾವಿನ‌ ಬಗ್ಗೆ ಸಿಬ್ಬಂದಿ ಜೊತೆ ಚರ್ಚೆ ನಡೆಸಿದ್ದೇನೆ. ಆಸ್ಪತ್ರೆಗೆ ಬಂದ ರೋಗಿಗಳಿಗೆ ಪ್ರೀತಿಯಿಂದ ಹಾಗೂ ಉಚಿತವಾಗಿ ಚಿಕಿತ್ಸೆ ನೀಡಿದರೆ ಮಾತ್ರ ಅದು ಸರ್ಕಾರಿ ಆಸ್ಪತ್ರೆ ಆಗುತ್ತದೆ. ಇಲ್ಲವಾದಲ್ಲಿ ಅದು ನರ್ಸಿಂಗ್ ಹೊಂ ಆಗುತ್ತದೆ. ಹೀಗಾಗಿ ಸರಿಯಾಗಿ ಕೆಲಸ ಮಾಡುವಂತೆ ವೈದ್ಯರಿಗೆ ಎಚ್ಚರಿಕೆ ಕೊಟ್ಟಿದ್ದೇನೆ ಎಂದರು.
ಔಷಧಿಗೆ ಚೀಟಿಯನ್ನು ಹೊರಗಡೆ ಬರೆದು ಕೊಡಬಾರದು, ಆಸ್ಪತ್ರೆ ಒಳಗಡೆಯೇ ಔಷಧಿ ಕೊಡಬೇಕು, ಅದರ ಬಗ್ಗೆಯೂ ಎಚ್ಚರಿಕೆ ಕೊಟ್ಟಿದ್ದೇನೆ. ಬಾಣಂತಿ ಮತ್ತು ಶಿಶು ಸಾವು ಪ್ರಕರಣ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ತನಿಖೆ ವರದಿ ಆಧರಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಯಲ್ಲಿ ಹಲವಾರು ಕೊರತೆಗಳಿವೆ ಅವುಗಳನ್ನು ಸರಿದೂಗಿಸುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

About The Author

You May Also Like

More From Author

+ There are no comments

Add yours