9ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು; ಇದೆಂಥಾ ದುರಂತ?

1 min read

 

9ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು

ಚಿಕ್ಕಮಗಳೂರು; ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಸಾವನ್ನಪ್ಪಿರುವ ಧಾರುಣ ಘಟನೆ ಶನಿವಾರ ನಡೆದಿದೆ.
ಪಟ್ಟಣದ ಬೆಥನಿ ಖಾಸಗಿ ಶಾಲೆಯಲ್ಲಿ ‌ಓದುತ್ತಿದ್ದ ವೈಷ್ಣವಿ ಮೃತ ದುರ್ದೈವಿ. ಇಂದು ಸಂಜೆ 7.30ರ ಸಮಯದಲ್ಲಿ ಬಾಲಕಿಗೆ ಹೃದಯಾಘಾತವಾಗಿ ಮೃತ್ಯು ಸಂಭವಿಸಿದೆ.
ಕಂಬನಿ ಮಿಡಿದ ಜನ; ಅತಿ ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾದ ವೈಷ್ಣವಿಯ ನಿಧನಕ್ಕೆ ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಸ್ನೇಹಿತರು ಹಾಗೂ ಪಟ್ಟಣದ ಜನತೆ ಕಂಬನಿ ಮಿಡಿದಿದ್ದಾರೆ.
ನೇತ್ರದಾನ; ಮಗಳನ್ನು ಅಕಾಲಿಕವಾಗಿ ಕಳೆದುಕೊಂಡ ನೋವಿನ ನಡುವೆಯೂ ಮೃತಳ ಪೋಷಕರು ಆಕೆಯ ಎರಡು ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಹಾಸನದ ವೈದ್ಯಕೀಯ ಕಾಲೇಜಿನ ನೇತ್ರ ಬ್ಯಾಂಕ್’ಗೆ ವೈಷ್ಣವಿಯ ಕಣ್ಣುಗಳನ್ನು ದಾನ ನೀಡಲು‌ ನಿರ್ಧರಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಅಂತಿಮ ಸಂಸ್ಕಾರ; ಮೃತಳ ಪೋಷಕರು ಮೂಡಿಗೆರೆ ಪಟ್ಟಣದ ಎಂ.ಜಿ ರಸ್ತೆಯಲ್ಲಿನ ರಾಮೇಶ್ವರ ಮೆಡಿಕಲ್ಸ್ ಪಕ್ಕದಲ್ಲಿ ಚಿನ್ನ ಬೆಳ್ಳಿ ರಿಪೇರಿ ಅಂಗಡಿ ಹೊಂದಿದ್ದರು. ಇವರು ಮೂಲತಃ ಮಹಾರಾಷ್ಟ್ರ ರಾಜ್ಯದವರಾಗಿದ್ದು, ಕಳೆದ ಹಲವು ವರ್ಷಗಳಿಂದ ಮೂಡಿಗೆರೆಯಲ್ಲಿ ನೆಲೆಸಿದ್ದರು. ಮೃತಳ ಅಂತಿಮ ಸಂಸ್ಕಾರವನ್ನು ಮಹಾರಾಷ್ಟ್ರದಲ್ಲಿ ನೆರವೇರಿಸಲು ಪೋಷಕರು ನಿರ್ಧರಿಸಿದ್ದಾರೆ.

About The Author

You May Also Like

More From Author

+ There are no comments

Add yours