ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ ವಶಕ್ಕೆ ಪಡೆದ ಪೊಲೀಸ್
Tumkurnews
ತುಮಕೂರು; ಮನೆಯೊಂದರಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದಲ್ಲಿ ಮದ್ಯ ಶೇಖರಣೆ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ಪಾವಗಡ ತಾಲ್ಲೂಕು ಮರಾರಾಯನಹಳ್ಳಿಯ ಪಾತಣ್ಣ ಎಂಬುವರ ಮನೆಯಲ್ಲಿ ಸುಮಾರು 20ಕ್ಕೂಅಧಿಕ ಬಾಕ್ಸ್’ಗಳಲ್ಲಿ ವಿವಿಧ ಬಗೆಯ ಮದ್ಯಗಳನ್ನು ಶೇಖರಣೆ ಮಾಡಿಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಶೇಖರಣೆ ಮಾಡಿದ್ದ ಮದ್ಯದ ಬಾಕ್ಸ್’ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ತನಿಖೆ ಮುಂದುವರೆದಿದೆ.
ವರದಿ; ಇಮ್ರಾನ್ ಉಲ್ಲಾ, ಪಾವಗಡ
+ There are no comments
Add yours