ಭೀಕರ ಅಪಘಾತ; ತುಮಕೂರಿನ ವ್ಯಕ್ತಿ ಸಾವು
Tumkurnews
ತುಮಕೂರು; ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ತುಮಕೂರು ಖಾಸಗಿ ಬಸ್ ನಿಲ್ದಾಣದಲ್ಲಿ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ
ತುಮಕೂರಿನ ಕುಣಿಗಲ್ ರಿಂಗ್ ರಸ್ತೆಯಲ್ಲಿ ಇಂದು ಬೆಳಗ್ಗೆ ಘಟನೆ ಸಂಭವಿಸಿದ್ದು, ಕ್ಯಾತ್ಸಂದ್ರ ಕಡೆಯಿಂದ ಬಂದ ಹಿಟಾಚಿ ತುಂಬಿದ ಲಾರಿಯೊಂದು ಎಂ.ಆರ್.ಪಿ.ಎಲ್ ಪೆಟ್ರೊಲ್ ಬಂಕು ಎದುರು ಕೆಟ್ಟು ನಿಂತಿತ್ತು. ಅದೇ ರಸ್ತೆಯಲ್ಲಿ ಹಿಂದಿನಿಂದ ಬಂದ ಕಾರು ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿಯಾಗಿದೆ.
ಅಪಘಾತದ ತೀವ್ರತೆಗೆ ಕಾರಿನ ಗಾಜುಗಳು ಚಾಲಕನ ಹೊಟ್ಟೆಗೆ ಹೊಕ್ಕಿದ್ದು, ಆತ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತ ಕಾರು ಚಾಲಕನನ್ನು ತುಮಕೂರಿನ ಸರಸ್ವತಿ ಪುರಂನ 2ನೇ ಕ್ರಾಸ್ ನಿವಾಸಿ ಶಾಂತವೀರಪ್ಪ ಎಂಬುವರ ಪುತ್ರ ಲೋಕೇಶ್ ಎಂದು ಗುರುತಿಸಲಾಗಿದ್ದು, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್.ಎಸ್ ಬಾರ್ ಸಿಬ್ಬಂದಿಯಿಂದ ಗ್ರಾಹಕನ ಕೊಲೆ; ಐವರು ಪೊಲೀಸ್ ವಶಕ್ಕೆ
+ There are no comments
Add yours