ಪಾವಗಡ; ತಾಲ್ಲೂಕಿನಾದ್ಯಂತ ನಾಳೆ ವಿದ್ಯುತ್ ವ್ಯತ್ಯಯ

1 min read

Tumkurnews
ಪಾವಗಡ; ತಾಲ್ಲೂಕಿನಾದ್ಯಂತ ಸೆ.24ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ಸೆ.24ರ ಶನಿವಾರ ಪಾವಗಡ ತಾಲ್ಲೂಕಿನ 220 ಕೆವಿ ಹಾಗೂ ಎಲ್ಲಾ 66/11ಕೆವಿ ಉಪ-ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಇದೆ. ಈ ಹಿನ್ನೆಲೆಯಲ್ಲಿ ಪಾವಗಡ ತಾಲ್ಲೂಕಿನಾದ್ಯಂತ ಸೆ.24 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ. ಆದ್ದರಿಂದ ಪಾವಗಡ ತಾಲ್ಲೂಕಿನ ವಿದ್ಯುತ್ ಗ್ರಾಹಕರು, ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಕೃಷ್ಣಮೂರ್ತಿ ತಿಳಿಸಿದ್ದಾರೆ.

About The Author

You May Also Like

More From Author

+ There are no comments

Add yours