ಸರ್ಕಾರಿ ನೌಕರರ ಮಕ್ಕಳಿಗಾಗಿ ಶಿಶುಪಾಲನ ಕೇಂದ್ರ ಆರಂಭ

1 min read

Tumkurnews
ತುಮಕೂರು; ನಗರದ ಜಿಲ್ಲಾ ಪಂಚಾಯತ್ ಕಚೇರಿ 3ನೇ ಮಹಡಿ ಮತ್ತು ಮಹಾನಗರ ಪಾಲಿಕೆ ಆವರಣದಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯಲಾಗಿದ್ದು, ಸರ್ಕಾರಿ ನೌಕರರ 6 ವರ್ಷದೊಳಗಿನ ಮಕ್ಕಳನ್ನು ಈ ಶಿಶುಪಾಲನಾ ಕೇಂದ್ರಕ್ಕೆ ದಾಖಲಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಹೆಚ್ಚಾಗುತ್ತಿದೆ ಡೆಂಗ್ಯೂ; ಸಾವು, ನೋವಾಗದಂತೆ ಎಚ್ಚರವಹಿಸಿ; ಜಿಲ್ಲಾಧಿಕಾರಿ ಸೂಚನೆ
ಶಿಶು ಪಾಲನಾ ಕೇಂದ್ರವು ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ಕಾರ್ಯನಿರ್ವಹಿಸಲಿದ್ದು, 6 ವರ್ಷದೊಳಗಿನ ಸರ್ಕಾರಿ ನೌಕರರ ಮಕ್ಕಳನ್ನು ಮಾತ್ರ ದಾಖಲಿಸಬಹುದಾಗಿದೆ.
ಕೇಂದ್ರದಲ್ಲಿ ಮಕ್ಕಳ ಪಾಲನೆ, ಪೋಷಣೆ, ಶಾಲಾಪೂರ್ವ ಶಿಕ್ಷಣ, ಪೂರಕ ಪೌಷ್ಟಿಕ ಆಹಾರ, ಕಲಿಕಾ ಸಾಮಗ್ರಿಗಳ ಸೌಲಭ್ಯವನ್ನು ಒದಗಿಸಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ಮಕ್ಕಳ ಪೋಷಣೆಗೆ ಒಬ್ಬ ಕಾರ್ಯಕರ್ತೆ ಮತ್ತು ಇಬ್ಬರು ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದು, ಹಾಲುಣಿಸುವ ತಾಯಂದಿರು ಕಚೇರಿ ಸಮಯದಲ್ಲಿ ಬಂದು ಹಾಲುಣಿಸಿ ಹೋಗಲು ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯ 1293 ಕೆರೆಗಳ ಸರ್ವೇಗೆ ಸೂಚನೆ; ಒತ್ತುವರಿ ತೆರವಿಗೆ ಅಲರ್ಟ್
ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿ, ನೌಕರರು ಶಿಶುಪಾಲನಾ ಕೇಂದ್ರದ ಸೌಲಭ್ಯವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ್ ಕಚೇರಿ ಶಿಶುಪಾಲನಾ ಕೇಂದ್ರದ ಕಾರ್ಯಕರ್ತೆ ರಾಧಾ ಮೊ.ಸಂ. 9986823754 ಮತ್ತು ಮಹಾನಗರ ಪಾಲಿಕೆ ಕಚೇರಿ ಶಿಶುಪಾಲನಾ ಕೇಂದ್ರದ ಕಾರ್ಯಕರ್ತೆ ಲಲಿತಾ ಮೊ.ಸಂ. 7483779394ನ್ನು ಸಂಪರ್ಕಿಬಹುದೆಂದು ಪ್ರಕಟಣೆ ತಿಳಿಸಿದೆ.

ಶಾಹಿಸ್ತಾ ಬಾನು ಎಂಬ 19 ವರ್ಷದ ಯುವತಿ ನಾಪತ್ತೆ

About The Author

You May Also Like

More From Author

+ There are no comments

Add yours