ಶಾಹಿಸ್ತಾ ಬಾನು ಎಂಬಾಕೆ ನಾಪತ್ತೆ
Tumkurnews
ತುಮಕೂರು; ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 19 ವರ್ಷದ ಯುವತಿ ಶಾಹಿಸ್ತಾ ಬಾನು ಏಪ್ರಿಲ್ 26ರಂದು ರಾತ್ರಿ ಕುಡುಮಲಕುಂಟೆ ಗ್ರಾಮದ ನರೇಶ ಎಂಬುವನ ಜೊತೆ ಹೋಗಿದ್ದು, ಮರಳಿ ಮನೆಗೆ ಬಂದಿರುವುದಿಲ್ಲ ಎಂದು ಈಕೆಯ ಸಂಬಂಧಿ ಸೈಯದ್ ದಾದಾಪೀರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಜಿಲ್ಲೆಯ 1293 ಕೆರೆಗಳ ಸರ್ವೇಗೆ ಸೂಚನೆ; ಒತ್ತುವರಿ ತೆರವಿಗೆ ಅಲರ್ಟ್
ಕಾಣೆಯಾದ ಯುವತಿಯು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಗ್ರಾಮದವಳಾಗಿದ್ದು, ಕೋಲು ಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಕನ್ನಡ ಮತ್ತು ಹಿಂದಿ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದಳು.
ಈಕೆಯ ಬಗ್ಗೆ ಸುಳಿವು ಸಿಕ್ಕವರು ದೂ.ವಾ.ಸಂ. 0816-2278000/2340/2242006 ಅಥವಾ ಮೊ.ಸಂ. 9480802900/20/31/49ನ್ನು ಸಂಪರ್ಕಿಸಬಹುದೆಂದು ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
ಹೆಚ್ಚಾಗುತ್ತಿದೆ ಡೆಂಗ್ಯೂ; ಸಾವು, ನೋವಾಗದಂತೆ ಎಚ್ಚರವಹಿಸಿ; ಜಿಲ್ಲಾಧಿಕಾರಿ ಸೂಚನೆ
+ There are no comments
Add yours