Tumkurnews
ತುಮಕೂರು; ತುಮಕೂರಿನಲ್ಲಿ ಒಂದೇ ಒಂದು ಸೀಟು ಕಾಂಗ್ರೆಸ್ ಬರುವುದಿಲ್ಲ. ನಾವು ಸಾಬರು, ನಾವು ಹೇಳುವ ಜ್ಯೋತಿಷ್ಯ ಎಂದಿಗೂ ಸುಳ್ಳಾಗುವುದಿಲ್ಲ. ಬೇಕಾದರೆ ನನ್ನ ಮಾತನ್ನು ಚುನಾವಣೆಯಾದ ಬಳಿಕ ನೆನಪಿಸಿಕೊಳ್ಳಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸವಾಲೆಸೆದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಮತ್ತು ಕೋಲಾರ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಜಿಲ್ಲೆಗಳನ್ನಾಗಿ ಮಾಡುವ ಸಂಕಲ್ಪ ತೊಟ್ಟಿದ್ದೇವೆ. ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಕ್ತ ಮಾಡಿದ್ದೇವೆ. ಈಗ ತುಮಕೂರು ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಮಾಡಲು ಹೊರಟ್ಟಿದ್ದೇವೆ ಎಂದರು.
ನಮ್ಮದೇನಿದ್ದರೂ ನಾರ್ಮಲ್ ಡಿಲಿವರಿ, ಆರಪೇಷನ್ ಮಾಡುವುದಿಲ್ಲ ಎಂದ ಅವರು ಆಪರೇಷನ್ ಜೆಡಿಎಸ್ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದರು. 40 ಪರ್ಸಂಟೆಜ್ ಬಿಜೆಪಿ ಸರ್ಕಾರ, 20 ಪರ್ಸೆಂಟೆಜ್ ಕಾಂಗ್ರೆಸ್ ಸರ್ಕಾರ ಎಂದು ಗುತ್ತಿಗೆದಾರರೆ ಹೇಳಿದ್ದಾರೆ. ಆದರೆ ನಮ್ಮ ಜೆಡಿಎಸ್ ಪಕ್ಷ ಡೆಲ್ಲಿಯ ನಾಯಕರಿಗೆ ದುಡ್ಡು ಕೊಡಬೇಕಾಗಿಲ್ಲ. ನಮ್ಮ ನಾಡು, ನೆಲ, ಜಲ ರಕ್ಷಣೆ ಕಾಪಾಡುವುದೇ ನಮ್ಮ ಧ್ಯೇಯ ಎಂದು ತಿಳಿಸಿದರು.
ನಾವು ಯಾರಿಗೂ ದುಡ್ಡು ಕೊಡಬೇಕಾಗಿಲ್ಲ. ಹಾಗಾಗಿ ನಮ್ಮ ಪಕ್ಷಕ್ಕೆ ಯಾವುದೇ ಕಮೀಷನ್ ಪಡೆಯುವ ಪ್ರಮೇಯವೇ ಬರುವುದಿಲ್ಲ. ನಮಲ್ಲಿ ಏನಿದ್ದರೂ ನಮ್ಮ ದುಡ್ಡು ನಮ್ಮ ಮನೆಗೆ ಮಾತ್ರ. 40 ಪರ್ಸಂಟೆಜ್ ಕಮೀಷನ್ ದಂಧೆಯಿಂದಾಗಿ ಈಗಾಗಲೇ ಬಿಜೆಪಿ ಕಾರ್ಯಕರ್ತನೆ ಸತ್ತಿದ್ದಾನೆ. ಈ ದಂಧೆ ಕುರಿತು ನ್ಯಾಯಾಂಗ ತನಿಖೆಯಾಗಲೇಬೇಕು ಎಂದ ಅವರು, ಯಾವ ಪಕ್ಷದ ಅವಧಿಯಲ್ಲಾದರೂ ಕಮೀಷನ್ ದಂಧೆ ನಡೆದಿದ್ದರೂ ನ್ಯಾಯಾಂಗ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಸಾವರ್ಕರ್ ಅಧ್ಯಯನ ಪೀಠದ ಹಿಂದೆ ಸರ್ಕಾರದ ಒತ್ತಡ; ಪರಮೇಶ್ವರ್
+ There are no comments
Add yours