ತಾಯಿ ಮತ್ತು ಮಗು ಕಾಣೆ
Tumkurnews
ತುಮಕೂರು: ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ ಎ.ಕೆ ಕಾಲೋನಿ ಗುಬ್ಬಿ ಟೌನ್‍ನಿಂದ ತಾಯಿ ಮತ್ತು ಮಗು ಕಾಣೆಯಾಗಿರುವ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮಹಿಳೆ 28 ವರ್ಷದ ಆಶಾ.ಜೆ ಎಂಬ ಹೆಸರಿನವಳಾಗಿದ್ದು, 5.3 ಅಡಿ ಎತ್ತರ, ಕೋಲುಮುಖ, ಗೋದಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಕಪ್ಪು ಮತ್ತು ಬಾದಾಮಿ ಹೂವಿನ ಚೂಡಿದಾರ್ ಧರಿಸಿರುತ್ತಾಳೆ. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾಳೆ.
ಮಗು ತನ್ವಿತಾ ಜಿ.ಎಚ್. 3 ವರ್ಷದವಳಾಗಿದ್ದು, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಹಳದಿ ಬಣ್ಣದ ಟೀಶರ್ಟ್ ಮತ್ತು ಕಪ್ಪು ಬಣ್ಣದ ಶಾಟ್ರ್ಸ್ ಧರಿಸಿದ್ದು, ಕನ್ನಡ ಮಾತನಾಡುತ್ತಾಳೆ.
ಕಾಣೆಯಾದವರ ಸುಳಿವು ಕಂಡುಬಂದಲ್ಲಿ ದೂ.ವಾ.ಸಂ. 08131-222229 ಅಥವಾ 08132-222210ಯನ್ನು ಸಂಪರ್ಕಿಸಬಹುದಾಗಿದೆ ಎಂದು ಗುಬ್ಬಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯ ಜಗ್ಗೇಶ್ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ
+ There are no comments
Add yours