ಬಡ ಟೈಲರ್’ನ ಜೀವ ಬಲಿ ಪಡೆದ ಮಧುಮೇಹ
Tumkurnews
ಕೊರಟಗೆರೆ; ಟೈಲರ್ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿಯೋರ್ವ ಸಕ್ಕರೆ ಕಾಯಿಲೆಯಿಂದ ಗ್ಯಾಂಗ್ರೀನ್ ಆಗಿ ಕಾಲುಗಳ ಬೆರಳುಗಳು ಕಟ್ಟಾಗಿ ಎರಡು ವರ್ಷ ಕಳೆದರೂ ವಾಸಿಯಾಗದೆ ಟೈಲರ್ ಕೆಲಸಕ್ಕೆ ಅಡಚಣೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊರಟಗೆರೆ ಪಟ್ಟಣದ ಒಂದನೇ ವಾರ್ಡಿನ ಹನುಮಂತಪುರದ ಡಿಗ್ರಿ ಕಾಲೇಜು ಪಕ್ಕದಲ್ಲಿ ವಾಸವಾಗಿರುವ ರಾಜಣ್ಣ ಎಂಬುವರ ಪುತ್ರ ಮಹೇಶ (42) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ತುಮಕೂರು ಜಿಲ್ಲಾಸ್ಪತ್ರೆ ವಿರುದ್ಧ ತನಿಖೆಗೆ ಆದೇಶ
ಮೃತ ಮಹೇಶ ಕೊರಟಗೆರೆ ಪಟ್ಟಣದಲ್ಲಿ ಟೈಲರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದನು. ಕಳೆದ ಏಳೆಂಟು ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದು, ಎರಡು ವರ್ಷಗಳ ಹಿಂದೆ ಗ್ಯಾಂಗ್ರೀನ್ ಆಗಿ ಕಾಲಿನ ಎರಡು ಬೆರಳುಗಳನ್ನು ತೆಗೆಯಲಾಗಿತ್ತು. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ವಾಸಿಯಾಗದೆ ಟೈಲರಿಂಗ್ ಕೆಲಸ ಮಾಡಲು ತೊಂದರೆಯಾಗುತ್ತಿತ್ತು. ಈ ಕಾರಣದಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸುರೇಶ್ ಹಾಗೂ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ವರದಿ; ಲಕ್ಷ್ಮೀಕಾಂತ್, ಕೊರಟಗೆರೆ
+ There are no comments
Add yours