Tumkurnews
ತುಮಕೂರು; ಹಿಂದೂ ಧರ್ಮವನ್ನು ಒಡೆಯಲು ಹೊರಟಿದ್ದ ಸಿದ್ದರಾಮಯ್ಯ ಅವರಿಗೆ ಈಗ ಜ್ಞಾನೋದಯವಾಗಿದ್ದು, ಪಶ್ಚಾತ್ತಾಪಕ್ಕಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75 ವರ್ಷದ ನಂತರ ಸಿದ್ದರಾಮಯ್ಯ ಅವರಿಗೆ ಹಿಂದೂ ಧರ್ಮ, ಮಠಮಾನ್ಯಗಳ ಬಗ್ಗೆ ಜ್ಞಾನೋದಯ ಆಗಿರುವುದು ಸಂತೋಷ. 75 ವರ್ಷಗಳಿಂದ ಹೆಚ್ಚು ಕಡಿಮೆ ತಿರಸ್ಕಾರ ಮನೋಭಾವದಿಂದಲೇ ಇದ್ದರು.
ಮುಪ್ಪಿನ ಕಾಲ ಅವರಿಗೆ ಜ್ಞಾನೋದಯ ಆಗಿದೆ. ಹಾಗಾಗಿ ಟೆಂಪಲ್ ರನ್ ಮಾಡುತ್ತಿದ್ದಾರೆ, ಮಠಮಾನ್ಯಗಳಿಗೆ ಹೋಗುತ್ತಿದ್ದಾರೆ ಎಂದರು.
ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಹಿಂದೂ ಅರ್ಚಕ!
ಹಿಂದೂ ಧರ್ಮ ಒಡೆಯಲು ಮಾಡಿದ ಕೆಲಸಕ್ಕೆ ಪಶ್ಚಾತ್ತಾಪ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಹಾಗೆ ಮಾಡುವುದಿಲ್ಲ ಎಂದು ಮಠಾಧೀಶರ ಬಳಿ ಹೋಗಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್’ನವರು ಚುನಾವಣೆ ಹತ್ತಿರ ಬಂದಾಗ ಹೊಸ ಹೊಸ ವೇಷಧಾರಿಗಳಾಗುತ್ತಾರೆ. ಹೊಸ ವೇಷಭೂಷಣ ಹಾಕಿಕೊಂಡ ಜನರಿಗೆ ಮೋಸ ಮಾಡುವ ಕೆಲಸದಲ್ಲಿ ಇರುತ್ತಾರೆ ಎಂದು ಟೀಕಿಸಿದರು.
ಸ್ವಾತಂತ್ರ್ಯ ಬಂದಾಗಿನಿಂದ 60 ವರ್ಷ ದೇಶದ ಜನರಿಗೆ ಮೋಸ ಮಾಡಿದ್ದಾರೆ. ಇದು ಜನರಿಗೆ ಗೊತ್ತಾದ ಮೇಲೆ ಸ್ಪಷ್ಟ ಬಹುಮತದಿಂದ ಬಿಜೆಪಿ ಸರ್ಕಾರ ಬಂದಿದೆ. ಮುಂದೆಯೂ ಕೂಡ 2023ರ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ಎಂದರು.
(ಗೋವಿಂದ ಕಾರಜೋಳ)
ಕಾಂಗ್ರೆಸ್ ಸರ್ಕಾರವೇ ಸಾವರ್ಕರ್ ಹೆಸರಿನಲ್ಲಿ ಪಾರ್ಕ್ ನಿರ್ಮಿಸಿದೆ!; ಅದೆಲ್ಲಿದೆ ಗೊತ್ತೇ?
+ There are no comments
Add yours