ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಹಿಂದೂ ಅರ್ಚಕ!

1 min read

Tumkurnews
ತುಮಕೂರು; ರಾಜ್ಯದಲ್ಲಿ ಧರ್ಮ ಸಂಘರ್ಷ ಜೋರಾಗಿರುವ ಬೆನ್ನಲ್ಲೇ ಹಿಂದೂ ದೇವಾಲಯದ ಅರ್ಚಕರೊಬ್ಬರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವ ಪ್ರಕರಣ ತುಮಕೂರಿನಲ್ಲಿ ನಡೆದಿದೆ.
ತುಮಕೂರು ತಾಲ್ಲೂಕು ಊರ್ಡಿಗೆರೆ ಹೋಬಳಿ ಹಿರೇಹಳ್ಳಿ ಗ್ರಾಮದ ಓಂಕಾರೇಶ್ವರ ದೇವಾಲಯದ ಅರ್ಚಕ ದಿ.ರೇಣುಕಾರಾದ್ಯ ಎಂಬುವರ ಪುತ್ರ ಎಚ್.ಆರ್ ಚಂದ್ರಶೇಖರಯ್ಯ ಉರುಫ್ ಮಂಜಣ್ಣ ಎಂಬುವವರು ಹಿಂದೂ ಧರ್ಮ ತ್ಯಜಿಸಿ, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ಭೀಕರ ಅಪಘಾತ; ತಂದೆ, ಮಗಳು ಸೇರಿ ಮೂವರು ಸಾವು
ಮತಾಂತರಗೊಂಡಿರುವ ಎಚ್.ಆರ್ ಚಂದ್ರಶೇಖರಯ್ಯ ಅವರು ತಮ್ಮ ಹೆಸರನ್ನು ಮುಬಾರಕ್ ಪಾಷಾ ಎಂದು ಬದಲಾಯಿಸಿಕೊಂಡಿದ್ದಾರೆ. ತಾವು ಹಲವಾರು ಸಮಸ್ಯೆಗಳ ಕಾರಣದಿಂದ ಆಗಸ್ಟ್ 18, 2022ರಂದು ತಮ್ಮ ಸ್ವ ಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ಚಂದ್ರಶೇಖರಯ್ಯ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಈ ಮತಾಂತರ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

(ಚಿತ್ರ; ಚಂದ್ರಶೇಖರಯ್ಯ ಮತಾಂತರಗೊಳ್ಳುತ್ತಿರುವುದು(ಹರಿಶಿಣ ಪಂಚೆ ಧರಿಸಿರುವವರು))

ತುಮಕೂರು ಡಿಸಿಸಿ ಬ್ಯಾಂಕ್ ವಿರುದ್ಧ ತನಿಖೆಗೆ ಆದೇಶ

About The Author

You May Also Like

More From Author

+ There are no comments

Add yours