ತುಮಕೂರಿನಲ್ಲಿ ಕಾವೇರಿಸಿದ ಸಾವರ್ಕರ್; ಫ್ಲೆಕ್ಸ್’ಗೆ ಪೊಲೀಸ್ ಭದ್ರತೆ

1 min read

Tumkurnews
ತುಮಕೂರು; ನಗರದಲ್ಲಿ ಸಾವರ್ಕರ್ ಫ್ಲೆಕ್ಸ್ ವಿವಾದ ಬಿಸಿಯೇರಿದ್ದು, ನಗರದ ಟೌನ್ ಹಾಲ್ ವೃತ್ತದಲ್ಲಿನ ಸಾವರ್ಕರ್ ಫ್ಲೆಕ್ಸ್’ಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಅಶೋಕ ರಸ್ತೆಯಲ್ಲಿ ಅಳವಡಿಸಲಾಗಿದ್ದ ಸಾವರ್ಕರ್ ಫ್ಲೆಕ್ಸ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ನಗರದ ಟೌನ್ ಹಾಲ್ ವೃತ್ತದಲ್ಲಿನ ಗಣಪತಿ ದೇವಸ್ಥಾನದಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಸಿದ್ದಾರೆ.

ಸಾವರ್ಕರ್ ಫ್ಲೆಕ್ಸ್’ಗೆ ಹಾನಿ ಪ್ರಕರಣ; ಎಸ್.ಪಿ ಹೇಳಿದ್ದೇನು? ವಿಡಿಯೋ
ಸದರಿ ಗಣಪತಿ ದೇವಸ್ಥಾನದ ಎದುರು ದರ್ಗಾ ಇದ್ದು, ಶಾಂತಿ ಕದಡುವ ಆತಂಕ ಇದೆ‌. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದಲೇ ಫ್ಲೆಕ್ಸ್ ಬಳಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಈಗಾಗಲೇ ಫ್ಲೆಕ್ಸ್ ವಿಚಾರವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಉಂಟಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದೆ. ಇದರ ಬೆನ್ನಲ್ಲೇ ತುಮಕೂರು ನಗರದಲ್ಲಿ ಕೂಡ ಫ್ಲೆಕ್ಸ್ ವಿಚಾರದಲ್ಲಿ ವಿವಾದ ಏರ್ಪಡುತ್ತಿರುವುದು ಸಾರ್ವಜನಿಕವಾಗಿ ಆತಂಕಕ್ಕೆ ಕಾರಣವಾಗಿದೆ. ಸದ್ಯ ಪೊಲೀಸರು ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದು, ಫ್ಲೆಕ್ಸ್’ಗೆ ಭದ್ರತೆ ಮುಂದುವರೆದಿದೆ.

ಕತ್ತರಿಸಿದ ಹಣ್ಣುಗಳ ಮಾರಾಟ ನಿಷೇಧ, ಹೋಟೆಲ್’ಗಳಿಗೆ ಜಿಲ್ಲಾಧಿಕಾರಿ ಮಹತ್ವದ ಸೂಚನೆ

About The Author

You May Also Like

More From Author

+ There are no comments

Add yours