ಪಾವಗಡದಲ್ಲಿ ಚಿರತೆ ಪ್ರತ್ಯಕ್ಷ; ವಿಡಿಯೋ

1 min read

ಪಾವಗಡದಲ್ಲಿ ಚಿರತೆ ಪ್ರತ್ಯಕ್ಷ; ಭಯದಲ್ಲಿ‌ಜನತೆ

Tumkurnews
ಪಾವಗಡ; ಪಟ್ಟಣ ಹೊರವಲಯದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನತೆ ಭಯಗೊಂಡಿದ್ದಾರೆ.
ಪಟ್ಟಣದ ತುಮಕೂರು ರಸ್ತೆ ಹೊರವಲಯದ ಎಸ್.ಎಸ್.ಕೆ ಕಾಲೇಜು ಮತ್ತು ಅಲ್ಪಸಂಖ್ಯಾತರ ಹೆಣ್ಣುಮಕ್ಕಳ ವಸತಿ ನಿಲಯದ ಮಧ್ಯ ಪ್ರದೇಶದಲ್ಲಿ ಮಂಗಳವಾರ ಚಿರತೆ ಕಂಡು ಬಂದಿದೆ.

ಸಾವರ್ಕರ್ ಫ್ಲೆಕ್ಸ್’ಗೆ ಹಾನಿ; ಕೇಸ್ ದಾಖಲು, ಶಾಂತಿ ಕಾಪಾಡುವಂತೆ ಎಸ್.ಪಿ ಮನವಿ
ಚಿರತೆಯು ನೀರು ಕುಡಿಯಲು ಬಂದ ಸಂದರ್ಭದಲ್ಲಿ ಮಣ್ಣು ಸಾಗಿಸುತ್ತಿದ್ದ ಟ್ರಾಕ್ಟರ್ ಚಾಲಕರೊಬ್ಬರು ಗಮನಿಸಿದ್ದು, ಮೊಬೈಲ್’ನಲ್ಲಿ ಚಿರತೆ ನೀರು ಕುಡಿದು ತೆರಳುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಅಗಿದ್ದು, ಜನತೆ ಭೀತಿಗೊಂಡಿದ್ದಾರೆ.

ಕರಡಿ ಬಂದಿತ್ತು; ಇದೀಗ ಚಿರತೆ ಕಾಣಿಸಿಕೊಂಡಿರುವ ಸ್ಥಳವು ಪಟ್ಟಣದಿಂದ ಕೇವಲ ಎರಡು ಕಿ.ಮೀ ದೂರದಲ್ಲಿದೆ. ಈ ಹಿಂದೆ ಒಮ್ಮೆ ಪಟ್ಟಣಕ್ಕೆ ಕರಡಿಯೊಂದು ಬಂದು ರಸ್ತೆಯಲ್ಲೆಲ್ಲಾ ಸುತ್ತಾಡಿ ಹೋಗಿತ್ತು. ಕಾಡು ಪ್ರಾಣಿಗಳು ಪಟ್ಟಣದಲ್ಲಿ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಪ್ರತ್ಯಕ್ಷವಾಗಿರುವ ಪರಿಶೀಲನೆ ನಡೆಸಿ, ಚಿರತೆಯನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ; ಇಮ್ರಾನ್ ಉಲ್ಲಾ, ಪಾವಗಡ

About The Author

You May Also Like

More From Author

+ There are no comments

Add yours