ವರಮಹಾಲಕ್ಷ್ಮೀ ವೃತ; ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ವಿಶೇಷ ಪೂಜೆ

1 min read

Tumkurnews
ತುಮಕೂರು; ಜಿಲ್ಲೆಯ‌ ಕೊರಟಗೆರೆ ತಾಲ್ಲೂಕಿನ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಅಂಗವಾಗಿ ವಿಶೇಷ ಪೂಜಾ ವಿಧಿಗಳು ನೆರವೇರಿದವು.
ಶ್ರಾವಣ ಮಾಸದ ಮೊದಲನೇ ಶುಭ ಶುಕ್ರವಾರ ಆದ ಇಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶ್ರೀ ಮಹಾಲಕ್ಷ್ಮೀ ಪುಣ್ಯಕ್ಷೇತ್ರದಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು.

(ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದಲ್ಲಿ ವಿಶೇಷ ಪೂಜೆ)

ಮಳೆ ಸಂತ್ರಸ್ತರಿಗೆ ಹುಳ ಬಿದ್ದಿರುವ ಊಟ ನೀಡಿದ ತುಮಕೂರು ಪಾಲಿಕೆ
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ಸನ್ನಿಧಾನಕ್ಕೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ದೇಶ ಮತ್ತು ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಭಕ್ತಾಧಿಗಳು ಆಗಮಿಸಿ ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿಯ ದರ್ಶನ ಮಾಡಿ, ಪೂಜೆಯಲ್ಲಿ ಪಾಲ್ಗೊಂಡು ಪುನೀತರಾದರು.
ಶ್ರೀ ಗೊರವನಹಳ್ಳಿ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ನಿಂದ ಪುಣ್ಯಕ್ಷೇತ್ರಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮಹಾಲಕ್ಷ್ಮಿ ದೇವಿಗೆ ಪಂಚಾಮೃತ ಅಭಿಷೇಕ, ಹೋಮ- ಹವನ ಸೇರಿದಂತೆ ಮಹಾ ಮಂಗಳಾರತಿ, ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನ; ಯಾರೆಲ್ಲಾ ಅರ್ಜಿ ಹಾಕಬಹುದು?; ಇಲ್ಲಿದೆ ಮಾಹಿತಿ
ವರಮಹಾಲಕ್ಷ್ಮೀ ಹಬ್ಬ ಆಚರಿಸುವ ಭಕ್ತರು ಗಣಪತಿ ಮತ್ತು ಗಂಗಾಪೂಜೆಯ ನಂತರ ಮಹಾಲಕ್ಷ್ಮೀ ಕಳಸಕ್ಕೆ ಹಲಸು , ಅರಳಿ, ಆಲ , ಹತ್ತಿಯ ಚಿಗುರು ಮತ್ತು ಹೊಂಬಾಳೆ ಕಮಲದ ಹೂವಿನ ಪೂಜಾ ವ್ರತ ಮಾಡಿ ನಂತರ ಗೊರವನಹಳ್ಳಿ ಕ್ಷೇತ್ರದ ಮಹಾಲಕ್ಷ್ಮೀ ದರ್ಶನ ಪಡೆದರೆ ಇಷ್ಟಾರ್ಥಗಳು ನೇರವೇರುತ್ತವೆ ಎಂಬುದು ಭಕ್ತರ ನಂಬಿಕೆ. ಅದರಂತೆ ಇಂದಿಗೂ ಕೂಡ ಈ ಆಚರಣೆಯನ್ನು ಭಕ್ತಾಧಿಗಳು ಮಾಡಿಕೊಂಡು ಬರುತ್ತಿದ್ದಾರೆ.
ದೇವಸ್ಥಾನದ ಪ್ರಧಾನ ಅರ್ಚಕ ದಿ. ಪ್ರಸನ್ನ ಸ್ವಾಮೀಜಿಯ ಅನುಪಸ್ಥಿತಿಯಲ್ಲಿ ಮಗ ಹಾಗೂ ಮುಖ್ಯ ಅರ್ಚಕ ಸುಬ್ರಹ್ಮಣ್ಯ ಶ್ರೀಗಳು ಇಂದಿನ ಪೂಜಾ ಕಾರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿಕೊಟ್ಟರು.

ಮಳೆ ಅವಾಂತರ; ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳಿಗೆ ಡಿಸಿ ಸೂಚನೆ

About The Author

You May Also Like

More From Author

+ There are no comments

Add yours