ಮಳೆಯಿಂದಾಗಿ ಹಾನಿಯಾದ ಪ್ರದೇಶಗಳಿಗೆ ಶಾಸಕ ಜಿ.ಬಿ ಜ್ಯೋತಿಗಣೇಶ್ ಭೇಟಿ
Tumkurnews
ಭೀಮಸಂದ್ರ; ಭೀಮಸಂದ್ರ ಅಮಾನಿಕೆರೆಯ ಏರಿ ಬಿರುಕು ಬಿಡುವ ಸಂಭವವಿದೆ ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕ ಜಿ.ಬಿ ಜ್ಯೋತಿಗಣೇಶ್ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಕೆರೆ ಏರಿಗೆ ಯಾವುದೇ ತೊಂದರೆ ಉಂಟಾಗಿಲ್ಲದಿರುವುದು ಗಮನಕ್ಕೆ ಬಂದಿದೆ. ಭೀಮಸಂದ್ರ ಕೆರೆ ಒಳಹರಿವು ಹೆಚ್ಚಾಗಿದ್ದು, ಕೆರೆ ಕೋಡಿ ಬಿದ್ದಿದೆ. ಸರಿ ಸುಮಾರು 600 ಕ್ಯೂಸೆಕ್‍ನಷ್ಟು ನೀರು ಹೊರ ಹರಿದಿದ್ದು, ಯಾರು ಸಹ ಅತಂಕ ಪಡುವ ಅಗತ್ಯವಿಲ್ಲ, ಕೆರೆಯ ಕೋಡಿ ಬಾಯಿಯ ಸುತ್ತ ಬೆಳೆದಿರುವ ಗಿಡಗೆಂಟೆಗಳನ್ನು ಸ್ವಚ್ಛ ಮಾಡಲು ಹಾಗೂ ನಿರಂತರವಾಗಿ ಅಧಿಕಾರಿಗಳು ಕೆರೆ ಏರಿಯ ಸ್ಥಿತಿಯನ್ನು ಪರಿಶೀಲನೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ತುಮಕೂರು- ಜೋಗ ಜಲಪಾತ; KSRTC ವಿಶೇಷ ಟೂರ್ ಪ್ಯಾಕೇಜ್ ಘೋಷಣೆ
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಉಪಾಧ್ಯಕ್ಷ ಹನುಮಂತರಾಯಪ್ಪ, ಪಾಲಿಕೆ ನಾಮಿನಿ ಸದಸ್ಯ ತ್ಯಾಗರಾಜಸ್ವಾಮಿ, ಮುಖಂಡರಾದ ಮನೋಹರ್, ಶರತ್, ವಿಜಯ್, ಮುರುಳಿ, ದೊಡ್ಡಯ್ಯ, ಬಾಲರಾಜು ಹಾಗೂ ಹೇಮಾವತಿ ನಾಲಾ ವಿಭಾಗದ ಅಧಿಕಾರಿಗಳು ಮತ್ತಿತ್ತರರು ಇದ್ದರು.
ತುಮಕೂರು ಜಿಲ್ಲೆಯಲ್ಲಿ ಒಂದೇ ವರ್ಷದಲ್ಲಿ 111 ಬಾಲೆಯರಿಗೆ ಕಂಕಣ ಕಂಟಕ!
+ There are no comments
Add yours