Tumkurnews
ಕುಣಿಗಲ್; ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಿ ಶನಿವಾರ ತೆರೆದಕುಪ್ಪೆ ಗ್ರಾಮಸ್ಥರು ಸರ್ಕಾರಿ ಆಸ್ಪತ್ರೆ ಎದುರು ಶವ ಇರಿಸಿ ಪ್ರತಿಭಟನೆ ನಡೆಸಿದರು.
ತಾಲೂಕಿನ ಕೊತ್ತಗೆರೆ ಹೋಬಳಿ ತೆರೆದಕುಪ್ಪೆ ಗ್ರಾಮದ ಮಹಿಳೆ ಪಲ್ಲವಿ( 21) ಮೃತ ಬಾಣಂತಿ. ಪ್ರತಿಭಟನೆ ವೇಳೆ ಆಸ್ಪತ್ರೆ ಆಡಳಿತಾಧಿಕಾರಿ ಗಣೇಶ್ ಬಾಬು ಮೇಲೆ ಮೃತಳ ಸಂಬಂಧಿಕರು ಹಲ್ಲೆಗೆ ಯತ್ನಿಸಿದರು. ಈ ವೇಳೆ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿದ್ದು, ಪೊಲೀಸರ ಮಧ್ಯ ಪ್ರವೇಶದಿಂದ ಸದ್ಯಕ್ಕೆ ಪರಿಸ್ಥಿತಿ ತಿಳಿಗೊಂಡಿದೆ.
ಉದ್ಯೋಗಿನಿ ಯೋಜನೆ; 3 ಲಕ್ಷ ರೂ. ಸಾಲ, 1.50 ಲಕ್ಷ ರೂ. ಸಬ್ಸಿಡಿ! ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ
ಪೋಷಕರ ಆರೋಪ; ಜುಲೈ 6ನೇ ತಾರೀಖು ಪಲ್ಲವಿಯನ್ನು ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಲ್ಲಿನ ವೈದ್ಯ ಹರೀಶ್ ಅವರು ಹಣ ನೀಡದರೇ ಹೆರಿಗೆ ಮಾಡುತ್ತೇನೆ, ಇಲ್ಲವಾದರೆ ಹೆರಿಗೆ ಮಾಡುವುದಿಲ್ಲ ಎಂದು ಒತ್ತಾಯಿಸಿ ಹಣಕ್ಕೆ ಬೇಡಿಕೆ ಇಟ್ಟಿದರು. ಪಲ್ಲವಿಯ ಪತಿ ಲೋಕೇಶ್ ಹಣ ತಂದು ಕೊಟ್ಟ ಬಳಿಕ ನಾರ್ಮಲ್ ಹೆರಿಗೆಯಾಗುವುದಿಲ್ಲ, ಸಿಜೇರಿನ್ ಹೆರಿಗೆ ಮಾಡುತ್ತೇನೆ ಎಂದು ಸಿಜೇರಿನ್ ಹೆರಿಗೆ ಮಾಡಿದ್ದಾರೆ. ಈ ವೇಳೆ ವಿಪರೀತ ರಕ್ತಸ್ರಾವವಾಗಿದ್ದು, ಬಾಣಂತಿ ಅಸ್ವಸ್ಥಳಾಗಿದ್ದಾಳೆ. ಆಗ ವೈದ್ಯ ಹರೀಶ್ ಸೇರಿದಂತೆ ಮೂವರು ವೈದ್ಯರು ಬಾಣತಿಯನ್ನು ಕರೆದೊಯ್ದು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಅಲ್ಲಿಂದ ಬೆಂಗಳೂರಿನ ಕೆಂಗೇರಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪಲ್ಲವಿ ಶುಕ್ರವಾರ ಮೃತಪಟ್ಟಿದ್ದಾಳೆ. ಇದಕ್ಕೆ ವೈದ್ಯರೇ ನೇರ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ತುಮಕೂರು; ಹಾಲು ಒಕ್ಕೂಟದಿಂದ ರೈತರಿಗೆ ಭಾರೀ ಮೋಸ; ಅಕ್ರಮ ಬಯಲಿಗೆಳೆದ ಯುವ ರೈತ
ಪಲ್ಲವಿಯ ಸಾವಿನಿಂದ ಆಕ್ರೋಶಗೊಂಡ ಪಲ್ಲವಿಯ ಪೋಷಕರು ಶನಿವಾರ ಆಸ್ಪತ್ರೆಗೆ ನುಗ್ಗಿ ದಾಂದಲೆಗೆ ಯತ್ನಿಸಿದರು, ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
+ There are no comments
Add yours