ನಿಧಿ ಕದಿಯಲು ಬಂದವರನ್ನು ಜೈಲಿಗಟ್ಟಿದ ಆಂಜನೇಯ!; ಮಾರುತಿ ಮಹಿಮೆ ಎಂದ ಭಕ್ತರು

1 min read

Tumkurnews
ಪಾವಗಡ; ದೇವಸ್ಥಾನದಲ್ಲಿ ನಿಧಿ ಶೋಧನೆ ಮಾಡುತ್ತಿದ್ದ ಐವರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಘಟನೆ ಸಂಭವಿಸಿದ್ದು, ಆರೋಪಿಗಳು ಪೊಲೀಸ್ ವಶದಲ್ಲಿದ್ದಾರೆ.

ಕಳ್ಳರ ಪಾಲಿನ ಸ್ವರ್ಗ; ತುಮಕೂರು KSRTC ಬಸ್ ನಿಲ್ದಾಣ!
ಘಟನೆ ಹಿನ್ನೆಲೆ; ಗ್ರಾಮದಲ್ಲಿನ 700 ವರ್ಷಗಳಷ್ಟು ಹಳೆಯದಾದ ಚೋಳಪುರ ಅಂಜನೇಯ ದೇವಸ್ಥಾನದಲ್ಲಿ ನಿಧಿ ಚೋರರ ಗುಂಪೊಂದು ನಿಧಿ ಶೋಧನೆ ನಡೆಸುತ್ತಿತ್ತು.
ದೇವಸ್ಥಾನಕ್ಕೆ ಟೈಲ್ಸ್ ಹಾಕುವ ನೆಪದಲ್ಲಿ ದೇವಾಲಯ ಪ್ರವೇಶಿಸಿದ್ದ ಐವರು ಆರೋಪಿಗಳು ದೇವಾಲಯದಲ್ಲಿ ಗುಂಡಿ ತೋಡಿ ನಿಧಿ ಶೋಧನೆ ಮಾಡುತ್ತಿದ್ದರು.
ಈ ವೇಳೆ ಗ್ರಾಮಸ್ಥರಿಗೆ ಅನುಮಾನ ಮೂಡಿದ್ದು,
ಕಳ್ಳರ ಸಂಚನ್ನು ಅರಿತು ಕೂಡಲೇ ಅವರನ್ನು ದೇವಸ್ಥಾನದಲ್ಲಿ ಕೂಡಿ ಹಾಕಿ ಸ್ಥಳಕ್ಕೆ ಪೋಲಿಸರನ್ನು ಕರೆಸಿದ್ದಾರೆ. ಬಳಿಕ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಕೈಗೊಂಡಿದ್ದಾರೆ. ಆರೋಪಿಗಳು ನೆರೆಯ ಆಂಧ್ರಪ್ರದೇಶದ ಕಂದೂರು, ಅನಂತಪುರ ವ್ಯಾಪ್ತಿಯ ಮುರುಳಿ, ನಾಗರಾಜ್, ಚಿನ್ನರೆಡ್ಡಿ, ವೆಂಕಟರಮಣಪ್ಪ, ಸಾಯಿಮುರುಳಿ ಎಂದು ತಿಳಿದುಬಂದಿದೆ. ಪಾವಗಡ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಒಟ್ಟಾರೆಯಾಗಿ ತನ್ನ ನಿಧಿ ಕದಿಯಲು ಬಂದವರನ್ನು ಆಂಜನೇಯ ದೇವರೇ ಜನರ ಮೂಲಕ ಪೊಲೀಸರಿಗೆ ಒಪ್ಪಿಸಿ ತಕ್ಕ ಶಾಸ್ತಿ ಮಾಡಿದ್ದಾನೆ ಎಂದು ಭಕ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

(ಘಟನೆಯ ವಿಡಿಯೋ)

ಮಹಿಳಾ ಅಭಿವೃದ್ಧಿ ನಿಗಮದಿಂದ ಬಡ್ಡಿ ರಹಿತ ಸಾಲ; ಅರ್ಜಿ ಆಹ್ವಾನ

About The Author

You May Also Like

More From Author

+ There are no comments

Add yours