ತುಮಕೂರು- ಜೋಗ ಜಲಪಾತ; KSRTC ವಿಶೇಷ ಟೂರ್ ಪ್ಯಾಕೇಜ್ ಘೋಷಣೆ

1 min read

Tumkurnews
ತುಮಕೂರು; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗವು ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ವಿಶೇಷ ಟೂರ್ ಪ್ಯಾಕೇಜ್‌ನಡಿ ಜುಲೈ 24 ರಿಂದ ಸಾರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.

ರೈಲ್ವೆ ಇಲಾಖೆಯಲ್ಲಿ ಉದ್ಯೋಗ; 1659 ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಳೆಗಾಲ ಪ್ರಾರಂಭವಾಗಿರುವ ಕಾರಣ ವಿಶ್ವವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಿಂದ ತಿಪಟೂರು – ಕಡೂರು – ಶಿವಮೊಗ್ಗ – ಸಾಗರ ಮಾರ್ಗವಾಗಿ ಜೋಗ ಜಲಪಾತಕ್ಕೆ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್ ಗಜೇಂದ್ರ ಕುಮಾರ್ ತಿಳಿಸಿದ್ದಾರೆ.

ತುಮಕೂರು; ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಯಾಣಿಕರು ನಿಗಮದ ಅವತಾರ್ ( www.ksrtc.karnataka . gov.in ) ತಂತ್ರಾಂಶದಲ್ಲಿ ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸಬಹುದಾಗಿದೆ.
ವಯಸ್ಕರಿಗೆ 650 ರೂ., ಹಾಗೂ 6-12 ವರ್ಷದೊಳಗಿನ ಮಕ್ಕಳಿಗೆ 400 ರೂ.,ಗಳ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ. ವಿಶೇಷ ಟೂರ್ ಪ್ಯಾಕೇಜ್‌ನಡಿ ಪ್ರತಿ ಶನಿವಾರ, ಭಾನುವಾರ ಹಾಗೂ ರಜಾದಿನಗಳಂದು ಸಾರಿಗೆ ಕಾರ್ಯಾಚರಣೆಯು ತುಮಕೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಮಧ್ಯರಾತ್ರಿ 12.45 ಕ್ಕೆ ಮರಳಿ ತುಮಕೂರು ತಲುಪಲಿದೆ.

ಕೊನೆಗೂ ಮಾಲೀಕರ ಮನೆ ಸೇರಿದ ಆಫ್ರಿಕನ್ ಗಿಣಿ; ಸಿಕ್ಕ ಬಹುಮಾನವೆಷ್ಟು ಗೊತ್ತೇ?
ಈ ವಿಶೇಷ ಪ್ಯಾಕೇಜ್‌ನಡಿ ಪ್ರಯಾಣಿಸುವ ಪ್ರವಾಸಿಗರು ಮಾರ್ಗಮಧ್ಯೆ ಉಪಹಾರ ಹಾಗೂ ಊಟದ ಊಟದ ವ್ಯವಸ್ಥೆಯನ್ನು ಸ್ವಂತ ಖರ್ಚಿನಲ್ಲಿ ಮಾಡಿಕೊಳ್ಳತಕ್ಕದ್ದು ಎಂದು ಅವರು ತಿಳಿಸಿದ್ದಾರೆ.

ಮಹಿಳಾ ಅಭಿವೃದ್ಧಿ ನಿಗಮದಿಂದ ಬಡ್ಡಿ ರಹಿತ ಸಾಲ; ಅರ್ಜಿ ಆಹ್ವಾನ

About The Author

You May Also Like

More From Author

+ There are no comments

Add yours