Tumkurnews
ತುಮಕೂರು; ಗುಬ್ಬಿ ತಾಲ್ಲೂಕಿನಲ್ಲಿ ನಡೆದಿರುವ ಸರ್ಕಾರಿ ಜಮೀನು ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಎಸ್.ಡಿ ದಿಲೀಪ್ ಕುಮಾರ್ ಮಾಡಿರುವ ಆರೋಪಕ್ಕೆ ಶಾಸಕ ಎಸ್.ಆರ್ ಶ್ರೀನಿವಾಸ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಕಲಿ ದಾಖಲೆ ಸೃಷ್ಟಿಸಿ 450 ಎಕರೆ ಸರ್ಕಾರಿ ಜಮೀನು ಕಬಳಿಕೆ ಪ್ರಕರಣದಲ್ಲಿ ಶಾಸಕ ಶ್ರೀನಿವಾಸ್ ಎ1 ಆರೋಪಿ ಎಂದು ಬಿಜೆಪಿಯ ದಿಲೀಪ್ ಹೇಳಿದ್ದಾರೆ. ಅವರಿಗೆ ಸರಿಯಾದ ಮಾಹಿತಿ ಇಲ್ಲ.
2004 ರಲ್ಲಿ ಕದ್ದು ಮೈನ್ಸ್ ಹೊಡೆದು ಅವರ 12 ಲಾರಿ ಹಾಗೂ ಹಿಟಾಚಿಯನ್ನು ಪೊಲೀಸರು ಸೀಜ್ ಮಾಡಿದ್ದರು. ಅವರನ್ನು ಬರೀ ಚಡ್ಡಿಯಲ್ಲಿ ಸ್ಟೇಷನ್ ನಲ್ಲಿ ಕೂರಿಸಿದ್ದರು. ಅವಾಗ ಸ್ಟೇಷನ್‌ಗೆ ಹೋಗಿ ಬಿಡಿಸಿದ್ದು ನಾನು. ಆ ಮನುಷ್ಯ ಇವತ್ತು ಮಾತನಾಡ್ತಾನೆ ಎಂದು ಹಳೆಯದನ್ನು ಕೆದಕಿ ಕಿಡಿಕಾರಿದರು.
ಇವಾಗ ಅರೆಸ್ಟ್ ಆಗಿರುವ ಆರೋಪಿ ಕರಿಯಣ್ಣ ಯಾರು? ನನ್ನ ಹಿಂದೆ ಇರುವವನಾ? ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಅಕ್ರಮ ಮಾಡಿರುವ ವಿಚಾರ ನನಗೆ ಮೊದಲು ಗೊತ್ತಾಯಿತು. ಆಗ ನಾನೇ ತಹಸೀಲ್ದಾರ್ ಗೆ ಹೇಳಿ ಪೊಲೀಸ್ ಸ್ಟೇಷನ್ ಗೆ ದೂರು ಕೊಡಿಸಿದ್ದೀನಿ. ಖುದ್ದಾಗಿ ಎಸ್. ಪಿ ಬಳಿಗೆ ಹೋಗಿ ಇದರ ಹಿಂದೆ ಯಾರಿದ್ದಾರೋ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದೀನಿ ಎಂದು ಶ್ರೀನಿವಾಸ್ ತಮ್ಮನ್ನು ಸಮರ್ಥಿಸಿಕೊಂಡರು.
ಪ್ರಕರಣದ ತನಿಖೆ ನಡೆಯುತ್ತಿದೆ, ಈ ಸಂದರ್ಭದಲ್ಲಿ ನಾನು ಯಾಕೆ ಮಧ್ಯ ಹೋಗಲಿ, ಪೊಲಿಟಿಕಲ್ ಗೇಮ್ ಮಾಡುವುದಕ್ಕೆ ನೊಡುತ್ತಿದ್ದಾರೆ. ಇವರ ಹಿಂದೆ ಮುಂದೆ ಇರುವವರೆಲ್ಲಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ದುರುದ್ದೇಶದಿಂದ ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇವರದೇ ಸರ್ಕಾರ ಇದೆ ತನಿಖೆ ಮಾಡಲಿ ಎಂದು ಸವಾಲು ಎಸೆದರು.
ಬಗರ್ ಹುಕ್ಕುಂನಲ್ಲಿ ಬಡವರಿಗೆ ಜಮೀನು ಮಂಜೂರು ಮಾಡಿದ್ದೀನಿ. ಒಂದು ವರ್ಷ ಟೈಮ್ ಇತ್ತು. ಫಾಸ್ಟ್ ಆಗಿ ಕೆಲಸ ಮಾಡಿ ಅಂತ ಅಧಿಕಾರಿಗಳಿಗೆ ನಾನೇ ಹೇಳಿದ್ದೆ. ಒಂದೊ ಎರಡೋ ತಪ್ಪು ಆಗಿರಬಹುದು.
ಪ್ರತಿಯೊಂದನ್ನು ನಾನು ಸ್ಪಾರ್ಟ್ ಗೆ ಹೋಗಿ ನೋಡುವುದಕೆ ಆಗಿಲ್ಲ. ಯಾವುದಾದರೂ ತಪ್ಪಾಗಿದ್ದರೆ ಅದನ್ನು ವಜಾ ಮಾಡಿಸಲಿ. ಇವಾಗಲೂ ವಜಾ ಮಾಡುವುದಕ್ಕೆ ಅವಕಾಶ ಇದೆ. ನಮ್ಮ ಸಂಬಂಧಿಕರಿಗೆ, ಹಿಂಬಾಲಕರಿಗೆ ಅರ್ಧ ಗುಂಟೆ ಜಮೀನು ಮಾಡಿಕೊಟ್ಟಿದ್ರೂ
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ.
ಒಂದೇ ಒಂದು ಕ್ಷಣವೂ ಶಾಸಕನಾಗಿ ಮುಂದುವರಿಯಲ್ಲ ಎಂದರು.
ತಲೆಗೆಟ್ಟವನೊಬ್ಬ ಹೇಳಿದ್ದಾನೆ. ಅವನಿಗೆ ಎಜುಕೇಶನ್ ಇದೆಯಾ? ಏನ್ ಮಾತಾಡ್ತಿನಿ, ಯಾವುದರ ಬಗ್ಗೆ ಮಾತಾಡ್ತಿನಿ ಅಂತ ಅವನಿಗೆ ಸರಿಯಾಗಿ ಅರಿವಿಲ್ಲ ಎಂದು ದಿಲೀಪ್ ಕುಮಾರ್ ವಿರುದ್ಧ ಹರಿಹಾಯ್ದರು.
ಇವಾಗ ನನ್ನ ಮೇಲೆ ಆರೋಪ ಮಾಡಿರುವ ವ್ಯಕ್ತಿ
ಕರಿಡಿಕಲ್ಲ ಬಳಿ 30,40 ಎಕರೆ ಜಮೀನು ಮಾಡಿದ್ದಾನೆ.
ಎಲೆಕ್ಷನ್ ಗೆ ನಿಂತು ಸೋತು 40 ಎಕರೆ ಜಮಿನು ಮಾಡಿದ್ದಾನೆ. ನಾನು ಸಾವಿರಾರು ಕೋಟಿ ಹೊಡೆದಿದ್ದೀನಿ ಅಂತ ಹೇಳ್ತಾನೆ. ಸಾವಿರ ಕೋಟಿಗೆ ಎಷ್ಟು ಸೊನ್ನೆ ಬರುತ್ತೆ ಅಂತ ಅವನಿಗೆ ಗೊತ್ತಿಲ್ಲ. ಇದೆಲ್ಲಾ ಎಲೆಕ್ಷನ್ ಗಿಮಿಕ್, ಎಲೆಕ್ಷನ್ ಟೈಮ್ ನಲ್ಲಿ ಕಾಗೆ ಗೂಬೆಗಳು ಬರುವುದು.
ಅದೇ ರೀತಿ ನನ್ನ ಮೇಲೆ ಬರ್ತಿದ್ದಾರೆ ಅಷ್ಟೇ ಎಂದು ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದರು.
+ There are no comments
Add yours