ಉದ್ಯೋಗ ಮೇಳ; ಐಟಿಐ, ಡಿಪ್ಲೊಮಾ, ಬಿ.ಇ, PG ಪಾಸಾದವರಿಗೆ ನೇರ ಸಂದರ್ಶನ

1 min read

 

Tumkurnews
ತುಮಕೂರು; ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಾದರಿ ವೃತ್ತಿಕೇಂದ್ರ, ತುಮಕೂರು ಹಾಗೂ ಅನನ್ಯ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮ್ಯಾನೇಜ್‍ಮೆಂಟ್ ಇವರ ಸಹಯೋಗದೊಂದಿಗೆ ವಿಶ್ವಕೌಶಲ್ಯ ದಿನಾಚರಣೆ ಅಂಗವಾಗಿ ಜು.15ರಂದು ಬೆಳಿಗ್ಗೆ 10.30 ಗಂಟೆಗೆ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ.
ಸದರಿ ಉದ್ಯೋಗ ಮೇಳಕ್ಕೆ ಬೆಂಗಳೂರು ಮತ್ತು ತುಮಕೂರಿನ 20ಕ್ಕೂ ಹೆಚ್ಚು ಹೆಸರಾಂತ ಕಂಪನಿಗಳು ಭಾಗವಹಿಸುತ್ತಿವೆ. ಎಸ್.ಎಸ್.ಎಲ್.ಸಿ., ಪಿ.ಯು.ಸಿ ಯಾವುದೇ ಪದವಿ, ಐಟಿಐ, ಡಿಪ್ಲೊಮಾ ಎಲ್ಲಾ ಟ್ರೇಡ್ ಬಿ.ಇ. ಹಾಗೂ ಸ್ನಾತಕೋತ್ತರ ಪದವಿ ಪಾಸಾದ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. 18 ರಿಂದ 35 ವರ್ಷದೊಳಗಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಅರ್ಹ ಅಭ್ಯರ್ಥಿಗಳು ಅಂದು ಬೆಳಿಗ್ಗೆ 10.30 ಗಂಟೆಗೆ ಅನನ್ಯ ಇನ್ಸ್‍ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‍ಮೆಂಟ್, ಟೌನ್ ಹಾಲ್ ಸರ್ಕಲ್ ಹತ್ತಿರ ತುಮಕೂರು ಇಲ್ಲಿ ತಮ್ಮ ಬಯೋಡೇಟಾ ಹಾಗೂ ಗುರುತಿನಚೀಟಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಲು ಉದ್ಯೋಗಾಧಿಕಾರಿಗಳು ಪ್ರಕಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816-2278488, 8123282455, 8792669410, 8660962667ನ್ನು ಸಂಪರ್ಕಿಸಬಹುದಾಗಿದೆ.

ಉದ್ಯೋಗ ಮೇಳ; SSLC, PUC, ಯಾವುದೇ ಪದವಿ ಓದಿದವರಿಗೆ ನೇರ ಸಂದರ್ಶ

About The Author

You May Also Like

More From Author

+ There are no comments

Add yours