ಬೆಳ್ಳಂಬೆಳಗ್ಗೆ ಎಲ್ಲೆಲ್ಲೂ ಪೊಲೀಸ್; ಸಿಹಿ ನಿದ್ದೆಯಲ್ಲಿದ್ದವರಿಗೆಲ್ಲಾ ಶಾಕ್

1 min read

 

Tumkurnews
ತುಮಕೂರು; ನಗರದ ರೌಡಿ ಶೀಟರ್ ಗಳಿಗೆ ಪೊಲೀಸರು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದಾರೆ.
ನಗರ ಸೇರಿದಂತೆ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತುಕೊಂಡಿದ್ದು, ರೌಡಿ ಶೀಟರ್ ಗಳ ಪೆರೇಡ್ ಆರಂಭಿಸಿದ್ದಾರೆ.
ಶುಕ್ರವಾರ ತುಮಕೂರು ನಗರದಲ್ಲಿ ರೌಡಿ ಶೀಟರ್ ಗಳ ಪೆರೇಡ್ ನಡೆಯಲಿದ್ದು, ಪೊಲೀಸರು ರೌಡಿಗಳ ಮನೆಗೆ ತೆರಳಿ ರೌಡಿ ಶೀಟರ್ ಗಳನ್ನು ಪೆರೇಡ್ ಗೆ ಹಾಜರಾಗುವಂತೆ ಎಚ್ಚರಿಕೆ ನೀಡಿದ್ದಾರೆ.
ನಗರದ ಹನುಮಂತ ಪುರ, ಕುಂದೂರು, ಬೆಳಗುಂಬ, ಕೋತಿತೋಪು ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ನೆಲೆಸಿದ್ದ ರೌಡಿ ಶೀಟರ್ ಗಳ ಮನೆಗೆ ಪೊಲೀಸರು ತೆರಳಿದ್ದು, ಸಿಹಿ ನಿದ್ದೆಯಲ್ಲಿದ್ದ ರೌಡಿ ಶೀಟರ್ ಗಳನ್ನು ಎಚ್ಚರಿಸಿ ಬಂದಿದ್ದಾರೆ. ನಗರದ ಚಿಲುಮೆ ಸಮುದಾಯ ಭವನದಲ್ಲಿ ಪೆರೇಡ್ ನಡೆಯಲಿದೆ.

(ಸಾಂದರ್ಭಿಕ ಚಿತ್ರ)

You May Also Like

More From Author

+ There are no comments

Add yours