ಪೋಷಕರಿಗೆ ಅಶ್ಲೀಲ ಮೆಸೇಜ್; ಶಿಕ್ಷಕ ಅಮಾನತು

1 min read

 

Tumkur News
ಮಧುಗಿರಿ: ವಿದ್ಯಾರ್ಥಿಗಳ ಪೋಷಕರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಶಿಕ್ಷಕನೊಬ್ಬನನ್ನು  ಅಮಾನತು ಮಾಡಿ ಡಿಡಿಪಿಐ‌ ಆದೇಶಿಸಿದ್ದಾರೆ.

ಮದ್ಯವ್ಯಸನಿ ತಂದೆಯನ್ನು ಕೊಂದ ಮಗ

ತಾಲ್ಲೂಕಿನ ದೊಡ್ಡಹಟ್ಟಿ ಸರ್ಕಾರಿ ಶಾಲೆಯ ಶಿಕ್ಷಕ ಸುರೇಶ್ ಅಮಾನತುಗೊಂಡಿದ್ದು, ಈತ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದನು ಎನ್ನಲಾಗಿದೆ. ವಿದ್ಯಾರ್ಥಿಗಳ ತಾಯಂದಿರ ವಾಟ್ಸಪ್ ಗೆ ಅಶ್ಲೀಲವಾಗಿ ಮೆಸೇಜ್ ಮಾಡಿ‌ ಕಿರುಕುಳ ನೀಡುತ್ತಿದ್ದಾನೆ ಎಂದು ಶಿಕ್ಷಕ ಸುರೇಶ್ ವಿರುದ್ಧ ಗ್ರಾಮದ ಮಹಿಳೆಯರು ಡಿಡಿಪಿಐಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ, ಶಿಕ್ಷಕ ಸುರೇಶ್ ನನ್ನು ಅಮಾನತುಗೊಳಿಸಿ ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪ ಆದೇಶ ಹೊರಡಿಸಿದ್ದಾರೆ.

You May Also Like

More From Author

+ There are no comments

Add yours