ಅಂಗಡಿಗಳ ಮೇಲೆ ದಾಳಿ; 40 ಕೆ.ಜಿ. ಪ್ಲಾಸ್ಟಿಕ್ ವಶ

1 min read

Tumkur News
ಕೊರಟಗೆರೆ: ತರಕಾರಿ ಸಂತೆ ಮತ್ತು ದಿನಸಿ ಅಂಗಡಿ, ಹೋಟೆಲ್, ಬೇಕರಿಗಳ ಮೇಲೆ ಪಟ್ಟಣ ಪಂಚಾಯಿತಿ‌ ಆರೋಗ್ಯಾಧಿಕಾರಿ ಮಹಮ್ಮದ್ ಹುಸೇನ್ ಅವರು ಪೌರಕಾರ್ಮಿಕ ತಂಡದೊಂದಿಗೆ ದಾಳಿ ನಡೆಸಿ, 40ಕೆಜಿಯಷ್ಟು ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಂಡರು.

ವಿದ್ಯಾರ್ಥಿಗಳಿಗೆ ಶುಭ ಸುದ್ದಿ; ಬಸ್ ಪಾಸ್ ಅವಧಿ ವಿಸ್ತರಣೆ

ಕಾರ್ಯಾಚರಣೆಯ ನಂತರ ಪ.ಪಂ. ಆರೋಗ್ಯ ನಿರೀಕ್ಷಕ‌ ಮಹಮ್ಮದ್ ಹುಸೇನ್ ಮಾತನಾಡಿ, ನಮ್ಮ ದೇಶದಲ್ಲಿ‌ ಪ್ಲಾಸ್ಟಿಕ್ ಬಹುದೊಡ್ಡ ಪಿಡುಗಾಗಿ ಪರಿಣಮಿಸಿದೆ. ಪರಿಸರ, ಮನುಷ್ಯ, ಪ್ರಾಣಿಗಳು, ಸಸ್ಯಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದು ಹಲವು ಬಗೆಯ ಕ್ಯಾನ್ಸರ್ ಗೆ ಕಾರಣವಾಗಿದೆ. ಮೆದುಳು ಮತ್ತು ಕಣ್ಣು ಸೇರಿದಂತೆ‌ ಹಲವು ಬಗೆಯ ತೊಂದರೆಗಳನ್ನು ಸೃಷ್ಟಿ ಮಾಡುತ್ತಿದೆ ಎಂದು ಹೇಳಿದರು.

ಮದ್ಯವ್ಯಸನಿ ತಂದೆಯನ್ನು ಕೊಂದ ಮಗ

ಈ ವೇಳೆ ಪ.ಪಂ. ನೌಕರರಾದ ನಾರಾಯಣ್, ನಾಗೇಶ್, ಮಂಜುನಾಥ್ ಸೇರಿದಂತೆ ಅನೇಕರು ಇದ್ದರು.

About The Author

You May Also Like

More From Author

+ There are no comments

Add yours