ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕಳ್ಳತನಕ್ಕೆ ಯತ್ನ

1 min read

 

Tumkur News
ಕುಣಿಗಲ್: ಉಪನೋಂದಣಾಧಿಕಾರಿ ಕಚೇರಿ ಕಿಟಕಿಯ ಸರಳು ಮುರಿದು, ಕಳ್ಳತನಕ್ಕೆ ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನಲ್ಲಿ ನಡೆದಿದೆ.

ಸಿಎಂ ಬದಲಾವಣೆ ಇಲ್ಲ; ನಿರಾಣಿ

ಬುಧವಾರ ತಡ ತಡರಾತ್ರಿ ಕಚೇರಿಯ ಕಿಟಕಿ ಕಬ್ಬಿಣ ಮುರಿದು ಕಚೇರಿ ಒಳಗೆ ಪ್ರವೇಶಿಸಿ ಬೀರು ಬೀಗ ಒಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ನಗದು ಸಿಗದ ಕಾರಣ ಬಂದ ದಾರಿಗೆ ಸುಂಕವಿಲ್ಲದಂತೆ ಕಳ್ಳರು ತೆರಳಿದ್ದಾರೆ. ಗುರುವಾರ  ಉಪನೊಂದಣಾಧಿಕಾರಿ ಯಶೋಧ ಕಚೇರಿಗೆ ಆಗಮಿಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಕುಣಿಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

You May Also Like

More From Author

+ There are no comments

Add yours