ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

1 min read

 

Tumkur News
ತುಮಕೂರು: ಕ್ಯಾತ್ಸಂದ್ರ ಮತ್ತು ತುಮಕೂರು ರೈಲ್ವೆ ನಿಲ್ದಾಣದ ಮಧ್ಯೆ ಅಪರಿಚಿತ ವ್ಯಕ್ತಿಯೊಬ್ಬರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ರಸ್ತೆ ಅಪಘಾತ; ಪತ್ನಿ ಮಡಿಲಲ್ಲಿ ಪತಿ ಸಾವು

ಸುಮಾರು 35 ವರ್ಷದ ವ್ಯಕ್ತಿಯಾಗಿದ್ದು, ಕೋಲುಮುಖ, ಕುರುಚಲು ಗಡ್ಡ, ಮೀಸೆ ಬಿಟ್ಟಿದ್ದು, ಮುಖದ ಭಾಗ ಚಿದ್ರವಾಗಿದ್ದು, ಸರಿಯಾದ ಮಾಹಿತಿ ಲಭ್ಯವಿಲ್ಲ. ಎಡಗೈನಲ್ಲಿ ಅಮ್ಮ ಆರ್.ಎ. ಎಂದು ಅಚ್ಚೆ ಗುರುತು ಇದೆ. ಮೈಮೇಲೆ ನೇರಳೆ ಬಣ್ಣದ ತುಂಬು ತೋಳಿನ ರೆಡಿಮೇಡ್ ಶರ್ಟ್, ಬಿಸ್ಕತ್ ಕಲರ್ ನ ರೆಡಿಮೇಡ್ ಪ್ಯಾಂಟ್ ಇದೆ. ಈ ಕುರಿತು ವಾರಸುದಾರರು ಇದ್ದರೆ, 9480702142 ಗೆ ಸಂಪರ್ಕಿಸಿ.

You May Also Like

More From Author

+ There are no comments

Add yours