ಕಾಲುಜಾರಿ ಬಾವಿಗೆ ಬಿದ್ದು ಮಹಿಳೆ ಸಾವು

1 min read

 

Tumkur News
ಕೊರಟಗೆರೆ: ಮಹಿಳೆಯೊಬ್ಬಳು ದಾರಿಯಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಖ್ಯಾತನಟ ಅಲ್ಲು ಅರ್ಜುನ್ ವಿರುದ್ಧ ಎಫ್ಐಆರ್!

ಕೊರಟಗೆರೆ ತಾಲೂಕಿನ ಅಕ್ಕಿರಾಂಪುರ ಗ್ರಾಮದ ಲೇಟ್ ಬೆಟ್ಟಯ್ಯ ಎಂಬುವರ ಮಡದಿ ಲಕ್ಷ್ಮಮ್ಮ (65 ವರ್ಷ) ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವಿಗೀಡಾದ ದುರ್ದೈವಿ ಯಾಗಿದ್ದಾಳೆ.

ಯುಟರ್ನ್ ಕುಮಾರ ಕಾಣೆಯಾಗಿದ್ದಾರೆ!

ಮೃತೆ ಲಕ್ಷ್ಮಮ್ಮ  ಮಾನಸಿಕ ಅಸ್ವಸ್ಥೆ ಎನ್ನಲಾಗಿದ್ದು,  ದರ್ಗಾ ಬಳಿಯ ಮನೆಯ ಮುಂಭಾಗ ಬಾವಿಯಲ್ಲಿ ಲಕ್ಷ್ಮಮ್ಮ ಬಾಡಿ ನೀರಿನಲ್ಲಿ ತೇಲಿದ್ದು, ಈಕೆ ಬಾವಿಯ ಪಕ್ಕದಲ್ಲಿ ನಡೆದುಹೋಗುವಾಗ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿದೆ.

ಗಂಡ್ಸಾದ್ರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ; ಎಚ್ಡಿಕೆಗೆ ಸವಾಲೆಸೆದ ಎಸ್.ಆರ್. ಶ್ರೀನಿವಾಸ್

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸಿದರು.

You May Also Like

More From Author

+ There are no comments

Add yours