ತವರಿಗೆ ಹೋದ ಪತ್ನಿ ನೆನೆದು ಆತ್ಮಹತ್ಯೆ!

1 min read

 

Tumkur News
ಕೊರಟಗೆರೆ : ತವರು ಮನೆಗೆ ಹೋದ ಪತ್ನಿಯ ನೆನೆಪಿನಲ್ಲಿ ಮನನೊಂದ ಪತಿ ಮಾನಸಿಕ ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗೊರುವ ಘಟನೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಮರೆನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಾಲುಜಾರಿ ಬಾವಿಗೆ ಬಿದ್ದು ಮಹಿಳೆ ಸಾವು

ಮರೆನಾಯಕನಹಳ್ಳಿ ಗ್ರಾಮದ ಶಿವಪ್ರಸಾದ್ (45) ವರ್ಷ ಮೃತಪಟ್ಟ ದುರ್ದೈವಿಯಾಗಿದ್ದು, ತನ್ನ ಅಕ್ಕನ ಮಗಳನ್ನೇ ಮದುವೆಯಾಗಿದ್ದ ಶಿವಪ್ರಸಾದ್ ನ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದೆ ಹೆಂಡತಿಯು ಮನೆ ಬಿಟ್ಟು ತವರು ಮನೆಗೆ ಹೋಗಿ ವಾಸವಿದ್ದಳು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶಿವಪ್ರಸಾದ್ ರಾತ್ರಿ 9 ಗಂಟೆಗೆ ಊಟ ಮಾಡಿ ಮನೆಯಿಂದ ಹೊರ ಹೋಗಿ ಪಕ್ಕದ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

3 ವರ್ಷಗಳ ಹಿಂದೆ ಮಹಿಳೆಯನ್ನು ಸುಟ್ಟು ಕೊಲೆ ಮಾಡಿದ್ದ ಆರೋಪಿಗಳ ಬಂಧನ!

ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ನಾಗರಾಜು, ಎಎಸ್ಐ ಯೋಗೀಶ್, ಮುಖ್ಯಪೇದೆ ಜಯಪ್ರಕಾಶ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

You May Also Like

More From Author

+ There are no comments

Add yours