ಲಾರಿಗಳ‌ ಅಪಘಾತ: ಒಂದು ಲಾರಿ ಭಸ್ಮ

1 min read

Tumkur News
ತುಮಕೂರು: ಕೆಟ್ಟುನಿಂತಿದ್ದ ಲಾರಿಗೆ ವೇಗವಾಗಿ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿ ಸಂಪೂರ್ಣ ಭಸ್ಮವಾದ ಘಟನೆ ನಗರದ ಬಟವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಗ್ರಾಮೀಣ ಬ್ಯಾಂಕ್ ಉದ್ಯೋಗ ಆಸಕ್ತರಿಗೆ ಸಿಹಿ ಸುದ್ದಿ; 8,106 ಹುದ್ದೆಗಳಿಗೆ‌ ಅರ್ಜಿ‌ ಆಹ್ವಾನ

ಪೂನಾದಿಂದ ಬೆಂಗಳೂರಿಗೆ ಮೈದಾ ತುಂಬಿಕೊಂಡು ಹೋಗುತ್ತಿದ್ದ ಲಾರಿಯು ಬಟವಾಡಿ ಸಮೀಪ ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಕಬ್ಬಿಣ ತುಂಬಿದ್ದ ಇನ್ನೊಂದು ಲಾರಿಗೆ ಡಿಕ್ಕಿ ಹೊಡೆದಿದ್ದು, ಮೈದಾ ಹಿಟ್ಟು ತುಂಬಿದ ಲಾರಿಗೆ ಬೆಂಕಿ ಹತ್ತಿಕೊಂಡಿದೆ.

ಎನ್.ಎಸ್.ಯು.ಐ. ಕಾರ್ಯಕರ್ತರಿಗೆ ಜಾಮೀನು ಮಂಜೂರು

ಅಗ್ನಿ ಶಾಮಕ ದಳ ಸ್ಥಳಕ್ಕೆ‌ಆಗಮಿಸಿ ಬೆಂಕಿ ನಂದಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ.‌ ಈ ಘಟನೆ ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.‌

About The Author

You May Also Like

More From Author

+ There are no comments

Add yours