ಶಾಕ್ ನೀಡಿದ ಡೀಸಿ; ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧ!

1 min read

ತುಮಕೂರು(ಜೂ.30) tumkurnews.in

ಜಿಲ್ಲೆಯ ಪಾನ ಪ್ರಿಯರಿಗೆ ಜಿಲ್ಲಾಧಿಕಾರಿಗಳು ಶಾಕ್ ನೀಡಿದ್ದು, ಆ.2ರವರೆಗೆ ಪ್ರತಿ ಭಾನುವಾರ ಮದ್ಯ ಮಾರಾಟ ನಿಷೇಧಿಸಿದ್ದಾರೆ.
ಕೋವಿಡ್-19ರ ಸೋಂಕು ನಿಯಂತ್ರಣ ಸಂಬಂಧ ಚಾಲ್ತಿಯಲ್ಲಿರುವ ಮುಂಜಾಗ್ರತಾ ಕ್ರಮಗಳ ಜೊತೆಗೆ ಇನ್ನೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ
ಜುಲೈ 5 ರಿಂದ ಆಗಸ್ಟ್ 2ರವರೆಗಿನ ಎಲ್ಲಾ ಭಾನುವಾರದಂದು ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ನಿಷೇಧಾವಧಿಯಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯದಂಗಡಿಗಳನ್ನು ಮುಚ್ಚಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಹಾಲಿ ಇರುವ ಮದ್ಯದಂಗಡಿಗಳ ಮುಚ್ಚುವ ವೇಳೆಯನ್ನು ರಾತ್ರಿ 9 ಗಂಟೆಗೆ ಬದಲಾಗಿ ರಾತ್ರಿ 8 ಗಂಟೆಗೆ ನಿಗದಿಪಡಿಸಿ ಅವರು ಆದೇಶಿಸಿದ್ದಾರೆ.

About The Author

You May Also Like

More From Author

+ There are no comments

Add yours