ನಗರ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

ತುಮಕೂರು,(ಜೂ.25) tumkurnews.in
ತುಮಕೂರು ನಗರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 1 ಮಿನಿ ಕಾರ್ಯಕರ್ತೆಯರ ಹುದ್ದೆ ಹಾಗೂ 7 ಸಹಾಯಕಿಯರ ತಾತ್ಕಾಲಿಕ ಹುದ್ದೆಗಳಿಗೆ ಗೌರವಧನ ಆಧಾರದ ಮೇಲೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ತುಮಕೂರು ನಗರ, ತಾಲೂಕು ವ್ಯಾಪ್ತಿಯ ಮರಳೂರು ಎಸ್‍ಸಿ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಒಂದು ಮಿನಿ ಅಂಗನವಾಡಿ ಕಾರ್ಯಕರ್ತೆ ಹುದ್ದೆ, ಅದೇರೀತಿ ಡಿ.ಎಂ ಪಾಳ್ಯ, ಭೀಮಸಂದ್ರ, ಶಾಂತಿನಗರ, ದಿಬ್ಬೂರು 3, ದಿಬ್ಬೂರು 4, ಬಟವಾಡಿ ಎಲ್.ಪಿ.ಎಸ್, ಕೋತಿತೋಪು ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು ವೆಬ್ ಸೈಟ್ www.anganwadirecruit.kar.nic.in ಮೂಲಕ ಜುಲೈ 18ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತುಮಕೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

About The Author

You May Also Like

More From Author

+ There are no comments

Add yours