ಕೊರಟಗೆರೆ ತಾಲೂಕಿನ ಅಂಗನವಾಡಿಗಳಲ್ಲಿ 23 ಹುದ್ದೆಗಳಿಗೆ ಅರ್ಜಿ ಆಹ್ವಾನ

1 min read

ತುಮಕೂರು, ಜೂ.21: tumkurnews.in:
ಕೊರಟಗೆರೆ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ 2 ಹುದ್ದೆ, ಮಿನಿ ಕಾರ್ಯಕರ್ತೆಯರ 3 ಹಾಗೂ ಸಹಾಯಕಿಯರ 18 ಹುದ್ದೆಗಳಿಗೆ ಗೌರವಧನ ಆಧಾರದ ಮೇಲೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕೊರಟೆಗೆರೆ ವ್ಯಾಪ್ತಿಯ ಟಿ.ಎಂ.ಬಿ.ಕೆ ಕಾಲೋನಿ ಹಾಗೂ ಕಲ್ಲುಗುಟ್ಟರಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ತಲಾ ಒಂದು ಕಾರ್ಯಕರ್ತೆ ಹುದ್ದೆ ಖಾಲಿ ಇದ್ದು, ಈ 2 ಹುದ್ದೆಗಳೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಅದೇ ರೀತಿ ವೆಂಕಟರಮಣನಹಳ್ಳಿ, ರಾಯವಾರ 2 ಹಾಗೂ ಮೋಟಗೊಂಡನಹಳ್ಳಿ ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ತಲಾ ಒಂದು ಮಿನಿ ಕಾರ್ಯಕರ್ತೆಯರ ಹುದ್ದೆ ಖಾಲಿಯಿದ್ದು, ಮೂರೂ ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ.
ಕೊರಟಗೆರೆ ತಾಲೂಕಿನಲ್ಲಿ ಒಟ್ಟು 18 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿಯಿದ್ದು, ತೋವಿನಕೆರೆ 2, ಬೈರೇನಹಳ್ಳಿ, ದೊಡ್ಡಪಾಲನಹಳ್ಳಿ, ಹೊಸಕೋಟೆ, ಚಿಕ್ಕಪಾಲನಹಳ್ಳಿ, ತಣ್ಣೇನಹಳ್ಳಿ, ಅಕ್ಕಿರಾಂಪುರ, ತಿಮ್ಮಸಂದ್ರ, ಚಿನ್ನಹಳ್ಳಿ, ಸಿಂಗ್ರಿಹಳ್ಳಿ, ಚಿಕ್ಕಣ್ಣನಹಳ್ಳಿ, ತೀತಾ 2 ಅಂಗನವಾಡಿ ಕೇಂದ್ರಗಳಲ್ಲಿರುವ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.  ಅದೇ ರೀತಿ ಹಕ್ಕಿಪಿಕ್ಕಿ ಕಾಲೋನಿ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆಯು ಪರಿಶಿಷ್ಟ ಪಂಗಡಕ್ಕೆ ಹಾಗು ಮೊರ್ಗಾನಹಳ್ಳಿ,   ಮರಚರಹಳ್ಳಿ, ಬೋಡಬಂಡೇನಹಳ್ಳಿ,   ಪುಟ್ಟಸಂದ್ರ ಎಕೆ.ಕಾಲೋನಿ,   ಗೊಂದಿಹಳ್ಳಿ ಕೇಂದ್ರಗಳಲ್ಲಿರುವ  ಸಹಾಯಕಿ ಹುದ್ದೆಗಳು ಪರಿಶಿಷ್ಟ ಜಾತಿಗೆ ಮೀಸಲಾಗಿವೆ.
ಆಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ತಮ್ಮ ಅರ್ಜಿಯನ್ನು  ವೆಬ್ ಸೈಟ್ www.anganwadirecruit.nic.in ಮೂಲಕ   ಜುಲೈ 18ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೊರಟಗೆರೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

About The Author

You May Also Like

More From Author

+ There are no comments

Add yours